ಬೆಂಗಳೂರಿನಲ್ಲಿ ನೀರು ಮಿಶ್ರಿತ ಡೀಸೆಲ್ ಹಾಕಿ ಬಂಕ್ ಸಿಬ್ಬಂದಿಯಿಂದ ಯಡವಟ್ಟು: ಕೆಟ್ಟು ನಿಂತ ವಾಹನಗಳು! - ಮಳೆ ನೀರು ಮಿಶ್ರಿತ ಡೀಸೆಲ್
🎬 Watch Now: Feature Video
ಬೆಂಗಳೂರು: ಪೆಟ್ರೋಲ್ ಬಂಕ್ ಸಿಬ್ಬಂದಿಯ ಯಡವಟ್ಟಿನಿಂದ ಹದಿನೈದಕ್ಕೂ ಅಧಿಕ ಕಾರುಗಳ ಇಂಜಿನ್‌ನಲ್ಲಿ ದೋಷ ಕಾಣಿಸಿಕೊಂಡು ಅವುಗಳು ಕೆಟ್ಟು ನಿಂತ ಘಟನೆ ತಡರಾತ್ರಿ ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಭಾರತ್ ಪೆಟ್ರೋಲ್ ಬಂಕ್ನಲ್ಲಿ ನಡೆಯಿತು. ಮಳೆ ನೀರು ಮಿಶ್ರಿತ ಡೀಸೆಲ್ ಹಾಕಿದ ಪರಿಣಾಮ ಕಾರುಗಳು ಕೆಟ್ಟು ನಿಂತಿವೆ ಎಂದು ಮಾಲೀಕರು ಆಕ್ರೋಶ ಹೊರಹಾಕಿದರು.
ಬಂಕ್ನ ಡೀಸೆಲ್ ಸಂಗ್ರಹಣಾ ಸಂಪ್‌ಗೆ ಮಳೆ ನೀರು ತುಂಬಿಕೊಂಡಿದೆ. ಇದನ್ನು ಗಮನಿಸದ ಬಂಕ್ ಸಿಬ್ಬಂದಿ ಮಳೆ ನೀರು ಮಿಶ್ರಿತ ಡೀಸೆಲ್ ಹಾಕಿದ್ದಾರೆ. ಸಿಟ್ಟಿಗೆದ್ದ ಕಾರು ಚಾಲಕರು ಬಂಕ್ ಮಾಲೀಕರೇ ಕಾರು ರಿಪೇರಿ ಮಾಡಿಸಿಕೊಡುವಂತೆ ಪಟ್ಟು ಹಿಡಿದರು.
ಕೊನೆಗೆ ಬಂಕ್ ಮಾಲೀಕರು ಕಾರುಗಳ ರಿಪೇರಿ ಮಾಡಿಸಿಕೊಡಲು ಸಮ್ಮತಿಸಿದರು. "ಶೇಕಡಾ 95ರಷ್ಟು ನೀರು ಮಿಶ್ರಿತ ಡೀಸೆಲ್ ಹಾಕಿದ್ದಾರೆ. ಮಾಲೀಕರು ಬರಲಿ, ಪರಿಹಾರ ಕೊಡಲಿ ಇಲ್ಲವಾದರೆ ಕಾರುಗಳನ್ನು ರಿಪೇರಿ ಮಾಡಿಸಿಕೊಡಲಿ. ರಿಪೇರಿಯಾಗಲು ಸಹ ಒಂದು ವಾರಕ್ಕೂ ಹೆಚ್ಚು ಸಮಯ ಬೇಕು. ಅಲ್ಲಿಯವರೆಗೆ ನಾವು ಏನು ಮಾಡೋದು?" ಎಂದು ಕಾರು ಚಾಲಕ ಸಂದೀಪ್ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ನೋಡಿ: ಈ ಅಕ್ಕಿಯನ್ನು ಜನ ಹೇಗೆ ತಿಂತಾರೆ: ಪ್ಲಾಸ್ಟಿಕ್ ಅಕ್ಕಿ ಮಿಶ್ರಣ ಆರೋಪದ ಬಗ್ಗೆ ಹೆಚ್ಕೆ ಪಾಟೀಲ್ ಆತಂಕ