ತುಮಕೂರು: ಬಸ್ ಮೇಲೆ ಮನಸೋ ಇಚ್ಛೆ ದಾಳಿ ಮಾಡಿದ ದೇವರ ಗೂಳಿ - ವಿಡಿಯೋ - ಈಟಿವಿ ಭಾರತ ಕರ್ನಾಟಕ
🎬 Watch Now: Feature Video


Published : Nov 18, 2023, 9:09 PM IST
ತುಮಕೂರು: ರೊಚ್ಚಿಗೆದ್ದ ಗೂಳಿಯೊಂದು ನಡು ರಸ್ತೆಯಲ್ಲೇ ಬಸ್ ಮೇಲೆ ಮನಸೋ ಇಚ್ಛೆ ದಾಳಿ ಮಾಡಿರುವ ಘಟನೆ ಜಿಲ್ಲೆಯ ಕೊರಟಗೆರೆ ಪಟ್ಟಣದಲ್ಲಿ ನಡೆದಿದೆ. ದೇವರ ಬಸವನ ಆರ್ಭಟದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೊರಟಗೆರೆ ಪಟ್ಟಣದಲ್ಲಿ ದೇವರಿಗೆ ಬಿಟ್ಟ ಎರಡು ಗೂಳಿಗಳಿದ್ದು, ಯಾವಾಗಲೂ ಪಟ್ಟಣದಲ್ಲಿ ಶಾಂತಿಯಿಂದ ಓಡಾಡಿಕೊಂಡಿದ್ದವು. ಆದರೆ, ಇದ್ದಕ್ಕಿದ್ದ ರೊಚ್ಚಿಗೆದ್ದ ಒಂದು ಗೂಳಿ ವಾಹನಗಳ ಮೇಲೆ ದಾಳಿ ಮಾಡಿದೆ. ಪಟ್ಟಣದ ಮುಖ್ಯ ರಸ್ತೆಯಲ್ಲಿ ಸಂಚರಿಸುತ್ತಿದ್ದ ಬಸ್, ಶಾಲಾ ವಾಹನಗಳ ಮೇಲೆ ದಾಳಿ ಮಾಡಿದೆ. ಗೂಳಿಯ ರೌದ್ರಾವತಾರಕ್ಕೆ ಜನರು ಬೆಚ್ಚಿಬಿದ್ದಿದ್ದಾರೆ. ಗೂಳಿಯನ್ನ ಶಾಂತಗೊಳಿಸಿ ಪಕ್ಕಕ್ಕೆ ಕಳುಹಿಸಲು ಸ್ಥಳೀಯರು ಹರಸಾಹಸ ಪಡಬೇಕಾಯಿತು.
ವೃದ್ಧೆಯ ಮೇಲೆ ಗೂಳಿ ದಾಳಿ: ಇತ್ತೀಚಿಗೆ, ವೃದ್ಧೆ ಮೇಲೆ ಗೂಳಿಯೊಂದು ದಾಳಿ ನಡೆಸಿರುವ ಘಟನೆ ಮೈಸೂರು ನಗರದ ಸರಸ್ವತಿಪುರಂನ ಪಾರ್ಕ್ ಬಳಿ ನಡೆದಿತ್ತು. ಮಂಜುಳಾ (64) ಗಾಯಗೊಂಡ ವೃದ್ಧೆ. ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಗೂಳಿ ದಾಳಿ ನಡೆಸಿರುವ ದೃಶ್ಯ ಪಾರ್ಕ್ ಮುಂಭಾಗದಲ್ಲಿರುವ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಮಂಜುಳಾ ಅವರು ರಸ್ತೆಯಲ್ಲಿ ನಡೆದುಕೊಂಡು ಹೋಗುವಾದ ಗೂಳಿಯೊಂದು ಏಕಾಏಕಿ ದಾಳಿ ನಡೆಸಿತ್ತು. ಗೂಳಿ ಗುದ್ದಿದ ರಭಸಕ್ಕೆ ನೆಲಕ್ಕೆ ಬಿದ್ದ ವೃದ್ಧೆಗೆ ಗಂಭೀರ ಗಾಯಗಳಾಗಿದ್ದವು.
ಇದನ್ನೂ ಓದಿ: ಶಾಲೆಗೆ ತೆರಳುತ್ತಿದ್ದ 8 ವರ್ಷದ ಬಾಲಕಿ ಮೇಲೆ ಗೂಳಿ ದಾಳಿ: ಇಲ್ಲಿದೆ ವಿಡಿಯೋ