ಜ್ಯೋತಿ ಗಣೇಶ್, ಸೊಗಡು ಶಿವಣ್ಣ ಬೆಂಬಲಿಗರಿಂದ ಬಿಎಸ್‌ವೈ ಕಾರಿಗೆ ಮುತ್ತಿಗೆ - bjp vijaya sankalpa yatre

🎬 Watch Now: Feature Video

thumbnail

By

Published : Mar 22, 2023, 11:49 AM IST

ತುಮಕೂರು: ತುಮಕೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್​ಗಾಗಿ ಮಾಜಿ ಸಚಿವ ಸೊಗಡು ಶಿವಣ್ಣ ಹಾಗೂ ಶಾಸಕ ಜ್ಯೋತಿ ಗಣೇಶ್ ನಡುವೆ ಭಾರಿ ಪೈಪೋಟಿ ಏರ್ಪಟ್ಟಿದೆ. ಮಂಗಳವಾರ ಜನ ಸಂಕಲ್ಪ ಯಾತ್ರೆಗೆ ಆಗಮಿಸಿದ್ದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕಾರಿಗೆ ಮುತ್ತಿಗೆ ಹಾಕಿ ಎರಡೂ ಬಣದವರು ಪರಸ್ಪರ ಘೋಷಣೆ ಮೊಳಗಿಸಿದರು. ಯಾತ್ರೆ ಸಂದರ್ಭದಲ್ಲಿ ಸೊಗಡು ಶಿವಣ್ಣ ಹಾಗೂ ಜ್ಯೋತಿ ಗಣೇಶ್ ಇಬ್ಬರನ್ನೂ ಯಡಿಯೂರಪ್ಪ ಅಕ್ಕಪಕ್ಕ ನಿಲ್ಲಿಸಿಕೊಂಡು ತುಮಕೂರು ನಗರದಲ್ಲಿ ನಡೆದ ರೋಡ್ ಶೋ ನಡೆಸಿದರು.

ರೋಡ್ ಶೋ ಆರಂಭಕ್ಕೂ ಮುನ್ನ ಸೊಗಡು ಶಿವಣ್ಣ ಹಾಗೂ ಜ್ಯೋತಿ ಗಣೇಶ್ ಅವರೊಂದಿಗೆ ಕೆಲಕಾಲ ಯಡಿಯೂರಪ್ಪ ಒಟ್ಟಿಗೆ ಕುಳಿತು ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಯಾತ್ರೆ ಸಫಲವಾಗುವಂತೆ ಯಾವುದೇ ರೀತಿಯ ಗೊಂದಲ ಉಂಟು ಮಾಡುದಂತೆ ಸೂಚಿಸಿದ್ದರು. ಹೀಗಾಗಿ ಎರಡು ಬಣಗಳ ಕಾರ್ಯಕರ್ತರು ಒಟ್ಟಿಗೆ ಭಾಗವಹಿಸಿದ್ದರು. ಆದರೆ ಯಡಿಯೂರಪ್ಪ ಯಾತ್ರೆಯಿಂದ ಹೊರಟ ತಕ್ಷಣ ಉಭಯ ಬಣದವರು ಪರಸ್ಪರ ತಮ್ಮ ನಾಯಕರು ಪರವಾಗಿ ಘೋಷಣೆ ಕೂಗಿದರು. ಯಡಿಯೂರಪ್ಪ ಹೊರಟಿದ್ದ ಕಾರನ್ನು ಸುತ್ತುವರಿದು ಮತ್ತೆ ಘೋಷಣೆಗಳನ್ನು ಮೊಳಗಿಸಿದರು.

ರೋಡ್ ಶೋ ಸಂದರ್ಭದಲ್ಲಿ ಮಾತನಾಡಿದ ಯಡಿಯೂರಪ್ಪ, ಹಿಂದೂ-ಮುಸ್ಲಿಂ ಎಂಬ ಬೇಧಭಾವ ನಮಗಿಲ್ಲ. ನಾವೆಲ್ಲರೂ ಒಂದೇ ತಾಯಿಯ ಮಕ್ಕಳಿದ್ದಂತೆ. ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ ಕೆಲಸ ಮಾಡಬೇಕಿದೆ ಎಂದು ಈಗಾಗಲೇ ಪ್ರಧಾನಿ ಮೋದಿ ಕರೆ ನೀಡಿದ್ದಾರೆ. ಅದರಂತೆ ನಾವು ಮುಂದೆ ಸಾಗುತ್ತಿದ್ದೇವೆ ಎಂದರು.

ಇದೇ ವೇಳೆ, ತುಮಕೂರಿನಲ್ಲಿ ದೊಡ್ಡ ಅಂತರದಲ್ಲಿ ಬಿಜೆಪಿ ಶಾಸಕರನ್ನು ಆಯ್ಕೆ ಮಾಡಿ ಕಳಿಸಿಕೊಡಬೇಕು. ಜಿಲ್ಲೆಯಲ್ಲಿ ಎಲ್ಲಿಯೂ ಕೂಡ ಕಾಂಗ್ರೆಸ್ ಖಾತೆ ತೆರೆಯದಂತೆ ಮತದಾರರು ಗಮನ ಹರಿಸುವಂತೆ ಮನವಿ ಮಾಡಿದರು.

ಇದನ್ನೂ ಓದಿ: ನಮ್ಮ ಶತ್ರು ರಾಷ್ಟ್ರ ಪಾಕಿಸ್ತಾನದ ಜನತೆಗೂ ಮೋದಿ ಆಡಳಿತ ಬೇಕು: ಲಕ್ಷ್ಮಣ ಸವದಿ

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.