ಲಾರಿ ಮೇಲೆ ಮುರಿದು ಬಿತ್ತು ಕಬ್ಬಿಣದ ಸಲಾಕೆ: ತಪ್ಪಿದ ಭಾರಿ ಅನಾಹುತ
🎬 Watch Now: Feature Video
ಹುಬ್ಬಳ್ಳಿ : ನಗರದಲ್ಲಿ ಭಾರಿ ವಾಹನ ತಡೆಗೆ ಅಲ್ಲಲ್ಲಿ ಮುಖ್ಯ ರಸ್ತೆಯಲ್ಲಿ ದೊಡ್ಡ ದೊಡ್ಡ ಕಬ್ಬಿಣದ ಸಲಾಕೆಯ ತಡೆಗಳನ್ಜು ನಿರ್ಮಿಸಲಾಗಿದೆ. ಅಂತದೇ ಒಂದು ಕಬ್ಬಿಣದ ಸಲಾಕೆ ಟ್ರಕ್ ವೊಂದರ ಮೇಲೆ ಮುರಿದು ಬಿದ್ದ ಘಟನೆ ವಾಣಿಜ್ಯನಗರಿ ಹುಬ್ಬಳ್ಳಿಯ ರೈಲ್ವೆ ನಿಲ್ದಾಣ ಹಾಗೂ ಗದಗಿನ ರಸ್ತೆಗೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ಮಂಗಳವಾರ ರಾತ್ರಿ ಸಂಭವಿಸಿದೆ.
ಟ್ರಕ್ ವಾಹನ ಚಲಿಸುತ್ತಿದ್ದ ವೇಳೆಯಲ್ಲಿಯೇ ಭಾರಿ ವಾಹನ ನಿಯಂತ್ರಿಸುವ ಅಡತಡೆಯ ಕಬ್ಬಿಣದ ಸಲಾಕೆಯೊಂದು ಮುರಿದು ಬಿದ್ದಿದ್ದು, ಹುಬ್ಬಳ್ಳಿ ಅಂಬೇಡ್ಕರ್ ವೃತ್ತದಲ್ಲಿ ಭಾರಿ ಅನಾಹುತವೊಂದು ತಪ್ಪಿದೆ. ಸದ್ಯ ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಟ್ರಕ್ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಭಾರೀ ವಾಹನ ನಿಯಂತ್ರಿಸಲು ಅಳವಡಿಸಲಾಗಿರುವ ಅಡತಡೆಯ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಘಟನೆ ಸಂಭವಿಸಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ದಕ್ಷಿಣ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ :ಹುಬ್ಬಳ್ಳಿ: ವಿದ್ಯುತ್ ತಂತಿ ತಗುಲಿ ಕ್ಯಾಂಟರ್ ವಾಹನ ಭಸ್ಮ