ಕುದುರೆ ಏರಿ ಮದುವೆ ಮಂಟಪಕ್ಕೆ ಬಂದ ವಧು!: ವಿಡಿಯೋ - ವಧು ಮೆರವಣಿಗೆ

🎬 Watch Now: Feature Video

thumbnail

By ETV Bharat Karnataka Team

Published : Nov 27, 2023, 5:00 PM IST

ರೇವಾರಿ, ಹರಿಯಾಣ: ವಿವಾಹ ಸಮಾರಂಭಗಳಲ್ಲಿ ವರ ಕುದುರೆಯನ್ನೇರಿ ಬರುವುದು ಸಾಮಾನ್ಯ. ಆದರೆ, ಹರಿಯಾಣದ ರೇವಾರಿಯಲ್ಲಿ ನಡೆದ ವಿವಾಹ ಮೆರವಣಿಗೆಯಲ್ಲಿ ವಧು ಕುದುರೆಯನ್ನೇರುವ ಮೂಲಕ ಗಮನ ಸೆಳೆದಿದ್ದಾರೆ. ಸುಭಾಷ್ ಬಸ್ತಿ ನಿವಾಸಿ ಧರಂಪಾಲ್ ಸರವಾನ್ ಎಂಬುವರು ತಮ್ಮ ಹಿರಿಯ ಪುತ್ರಿ ಜ್ಯೋತಿಯನ್ನು ಕುದುರೆ ಮೇಲೆ ಹತ್ತಿಸಿಕೊಂಡು ಮೆರವಣಿ ಮಾಡುವ ಮೂಲಕ ಸ್ಥಳೀಯರನ್ನು ಹುಬ್ಬೇರಿಸುವಂತೆ ಮಾಡಿದರು. ಮದುವೆ ಪೋಷಾಕು ಧರಿಸಿದ್ದ ವಧು ಜ್ಯೋತಿ, ವಿವಾಹಕ್ಕೂ ಮುನ್ನ ಕುದುರೆ ಏರಿ ಹೊಸ ಸಂಪ್ರದಾಯಕ್ಕೆ ಅಡಿ ಇಟ್ಟರು. ನೃತ್ಯದ ಮೂಲಕ ವಧುವಿನ ಕುಟುಂಬದವರು ಮತ್ತು ಸ್ನೇಹಿತರು ಮೆರವಣಿಗೆಯಲ್ಲಿ ಸಾಗಿದರು. ಈ ಅಪರೂಪದ ದೃಶ್ಯ ನೋಡಲು ಜನ ನಗರದ ರಸ್ತೆಯಲ್ಲಿ ಜಮಾಯಿಸಿದ್ದರು.

ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳು ಯಾವುದರಲ್ಲಿಯೂ ಕಡಿಮೆ ಇಲ್ಲ. ಅವಳು ಕೂಡ ಪುರುಷನಷ್ಟೇ ಸರಿಸಮಾನಳು. ಇಂದು ನನ್ನ ತಂದೆ ಇದನ್ನು ಸಾಬೀತು ಪಡಿಸಿದ್ದಾರೆ. ಸಮಾಜದಲ್ಲಿ ಗಂಡಿನಷ್ಟೇ ಹೆಣ್ಣಿಗೂ ಸಮಾನ ಹಕ್ಕಿದೆ. ನಾನು ಪದವೀಧರಳಾಗಿದ್ದು, ನನ್ನ ತಂದೆ - ತಾಯಿ ಬಗ್ಗೆ ನಾನು ಹೆಮ್ಮೆ ಪಡುತ್ತೇನೆ. ಪ್ರತಿ ತಂದೆ - ತಾಯಿ ತಮ್ಮ ಮಕ್ಕಳನ್ನು ಹೀಗೆ ನಡೆಸಿಕೊಂಡರೆ ಸಮಾಜದಲ್ಲಿರುವ ತಾರತಮ್ಯ  ತೊಡೆದು ಹಾಕಬಹುದು ಎಂದು ಜ್ಯೋತಿ ಖುಷಿ ಹಂಚಿಕೊಂಡರು. ಮಗಳು ವಿದ್ಯಾಭ್ಯಾಸದಲ್ಲಿ ಮುಂದಿದ್ದಾಳೆ. ಪುತ್ರರಂತೆ ಪುತ್ರಿಯರಿಗೂ ಸಮಾಜದಲ್ಲಿ ಸಮಾನ ಗೌರವ ಸಿಗಬೇಕು. ಹೆಣ್ಣು ಮಕ್ಕಳಿಗೆ ಯಾವುದೇ ರೀತಿಯ ತಾರತಮ್ಯ ಮಾಡಬಾರದು ಎಂದು ಧರಂಪಾಲ್ ಕೂಡ ಸಮಾನತೆಯ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. 

ಇದನ್ನೂ ಓದಿ: ರಾಯಲ್ ವೆಡ್ಡಿಂಗ್: ಹೆಲಿಕಾಪ್ಟರ್​ನಲ್ಲಿ ಮದುವೆ ಮೆರವಣಿಗೆ ಮಾಡಿಕೊಂಡ ವರ - ವಿಡಿಯೋ

ABOUT THE AUTHOR

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.