ಜೆಸಿಬಿಗೆ ಅಪ್ಪಳಿಸಿದ ಬಂಡೆ! ಆಟಿಕೆಯಂತೆ ಪುಟಿದು ಉರುಳಿದ ಯಂತ್ರ- ವಿಡಿಯೋ ನೋಡಿ - JCB
🎬 Watch Now: Feature Video
ಪಿಥೋರಗಢ (ಉತ್ತರಾಖಂಡ): ಉತ್ತರಾಖಂಡದಲ್ಲಿ ಮಳೆ ಮುಂದುವರೆದಿದೆ. ಭಾರಿ ವರ್ಷಧಾರೆಗೆ ಭೂ ಕುಸಿತದಂತಹ ಘಟನೆಗಳು ನಿರಂತರವಾಗಿ ವರದಿಯಾಗುತ್ತಿವೆ. ರಸ್ತೆ ಸಂಚಾರಕ್ಕೂ ಅಡಚಣೆ ಉಂಟಾಗುತ್ತಿದೆ. ಅಧಿಕಾರಿಗಳು ಜೆಸಿಬಿಯಂತಹ ಯಂತ್ರಗಳ ಸಹಾಯದಿಂದ ರಸ್ತೆ ದುರಸ್ತಿ ಹಾಗೂ ಕಲ್ಲು ಬಂಡೆಗಳು, ಮಣ್ಣು ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇದರ ನಡುವೆ ಗುಡ್ಡದಿಂದ ದೊಡ್ಡ ಬಂಡೆಯೊಂದು ಬಂದಪ್ಪಳಿಸಿದ ಪರಿಣಾಮ ಜೆಸಿಬಿ ಯಂತ್ರವೇ ಕಂದಕಕ್ಕೆ ಉರುಳಿದ್ದ ಘಟನೆ ಪಿಥೋರಗಢ ಜಿಲ್ಲೆಯಲ್ಲಿ ನಡೆದಿದೆ. ಇದರ ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗಿದ್ದು, ನೋಡುಗರನ್ನು ಬೆಚ್ಚಿಬೀಳಿಸುವಂತಿವೆ.
ಇಲ್ಲಿನ ಧಾರ್ಚುಲಾ ಪ್ರದೇಶದ ತವಘಾಟ್-ಸೋಬ್ಲಾ ರಸ್ತೆ ಮಾರ್ಗದಲ್ಲಿ ಜೆಸಿಬಿ ಸಹಾಯದಿಂದ ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳಲಾಗುತ್ತಿತ್ತು. ಈ ವೇಳೆ ದೊಡ್ಡ ಗಾತ್ರದ ಬಂಡೆ ಗುಡ್ಡದ ಮೇಲಿಂದ ರಭಸವಾಗಿ ಉರುಳಿದೆ. ನೇರವಾಗಿ ಜೆಸಿಬಿ ಯಂತ್ರಕ್ಕೆ ಅಪ್ಪಳಿಸಿದೆ. ಜೆಸಿಬಿ ಆಟಿಕೆಯಂತೆ ಪುಟಿದು ರಸ್ತೆ ಪಕ್ಕದ ಕಂದಕಕ್ಕೆ ಜಾರಿ ಬಿತ್ತು. ಘಟನೆಯನ್ನು ಪಿಥೋರಗಢ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ವರ್ ಸಿಂಗ್ ಖಚಿತಪಡಿಸಿದ್ದಾರೆ. ಸದ್ಯಕ್ಕೆ ಯಾವುದೇ ಸಾವು-ನೋವಿನ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
ಇದನ್ನೂ ಓದಿ: ಧಾರಾಕಾರ ಮಳೆ, ಭೂಕುಸಿತಕ್ಕೆ ತತ್ತರಿಸಿದ ಹಿಮಾಚಲ.. 800 ಜನರನ್ನು ರಕ್ಷಿಸಿದ ವಾಯುಪಡೆ