ಅಮೆರಿಕದಲ್ಲಿ ಶೂಟಿಂಗ್​ ವೇಳೆ ಗಾಯಗೊಂಡಿದ್ದ ಶಾರೂಖ್​ ಖಾನ್​ ಭಾರತಕ್ಕೆ ವಾಪಸ್​: ವಿಡಿಯೋ - Shah Rukh Khan arrives at Mumbai

🎬 Watch Now: Feature Video

thumbnail

By

Published : Jul 5, 2023, 8:08 AM IST

ಮುಂಬೈ: ಬಾಲಿವುಡ್​ ನಟ​ ಶಾರುಖ್​ ಖಾನ್ ಅಮೆರಿಕದಲ್ಲಿ 'ಜವಾನ್​' ಸಿನಿಮಾ ಶೂಟಿಂಗ್​ ವೇಳೆ ಮೂಗಿಗೆ ಗಾಯ ಮಾಡಿಕೊಂಡು ಶಸ್ತ್ರಚಿಕಿತ್ಸೆ ಒಳಗಾಗಿದ್ದರು. ಇದೀಗ ಭಾರತಕ್ಕೆ ಆಗಮಿಸಿದ್ದಾರೆ. ಕಳೆದ ರಾತ್ರಿ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು.  

ಲಾಸ್​ ಏಂಜಲೀಸ್​ನಲ್ಲಿ ಶೂಟಿಂಗ್​ ನಡೆಯುತ್ತಿದ್ದಾಗ ನಡೆದ ಅವಘಡದಲ್ಲಿ ಶೂರೂಖ್​ ಮೂಗಿಗೆ ಬಲವಾಗಿ ಪೆಟ್ಟು ಬಿದ್ದಿತ್ತು. ಇದರಿಂದ ರಕ್ತಸ್ರಾವವಾಗಿತ್ತು. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಸಣ್ಣ ಶಸ್ತ್ರಚಿಕಿತ್ಸೆ ನಡೆಸಿದ್ದರು. ಲಾಸ್​ ಏಂಜಲೀಸ್​ ಆಸ್ಪತ್ರೆಯಿಂದ ಬಿಡುಗಡೆ ಹೊಂದಿರುವ ಶಾರೂಖ್​ ಭಾರತಕ್ಕೆ ವಾಪಸ್​​ ಆಗಿದ್ದಾರೆ. ಆರೋಗ್ಯ ಸ್ಥಿತಿ ಬಗ್ಗೆ ಹೆಚ್ಚು ಮಾಹಿತಿ ನೀಡಿಲ್ಲವಾದರೂ, ಮನೆಯಲ್ಲಿಯೇ ಚೇತರಿಸಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ದೊರೆತಿದೆ.  

ಶಾರುಖ್ ಖಾನ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ಜವಾನ್ ಸೆಪ್ಟೆಂಬರ್ 7ರಂದು ಜಗತ್ತಿನಾದ್ಯಂತ ಬಿಡುಗಡೆ ಆಗಲಿದೆ. ಸದ್ಯದಲ್ಲೇ ಟೀಸರ್ ಹೊರ ಬರಲಿದೆ. ಜುಲೈ 7 ಅಥವಾ 15ರಂದು ಜವಾನ್ ಟೀಸರ್‌ನ ಗ್ರ್ಯಾಂಡ್ ಲಾಂಚ್​ಗಾಗಿ ಸಿದ್ಧತೆಗಳು ನಡೆಯುತ್ತಿವೆ.

ಇದನ್ನೂ ಓದಿ: Shah Rukh Khan: ಶೂಟಿಂಗ್​ ವೇಳೆ ಗಾಯಗೊಂಡ ಶಾರುಖ್​ ಖಾನ್​, ಯಶಸ್ವಿ ಶಸ್ತ್ರಚಿಕಿತ್ಸೆ

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.