ಕಿತ್ತೂರು ಉತ್ಸವ: ಜಲಸಾಹಸ ಕ್ರೀಡೆಯಲ್ಲಿ ಮಿಂದೆದ್ದ ಕುಂದಾನಗರಿ ಮಂದಿ- ವಿಡಿಯೋ - ಕಿತ್ತೂರು ರಾಣಿ ಚೆನ್ನಮ್ಮ ಉತ್ಸವ
🎬 Watch Now: Feature Video


Published : Oct 24, 2023, 10:21 PM IST
|Updated : Oct 24, 2023, 10:39 PM IST
ಬೆಳಗಾವಿ: ಚೆನ್ನಮ್ಮನ ಕಿತ್ತೂರು ಉತ್ಸವದ ಅಂಗವಾಗಿ ಆಯೋಜಿಸಿರುವ ಜಲಸಾಹಸ ಕ್ರೀಡೆಗೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ. ಪ್ರವಾಸಿಗರ ದಂಡೇ ಕೆರೆಯತ್ತ ಹರಿದು ಬಂದಿದೆ. ಕಿತ್ತೂರಿನ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ತುಂಬುಗೇರೆಯಲ್ಲಿ ಉತ್ಸವ ನಿಮಿತ್ತ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ಜಲ ಸಾಹಸ ಕ್ರೀಡೆಯಲ್ಲಿ ಜನರು ಭಾಗಿಯಾಗಿ ಎಂಜಾಯ್ ಮಾಡುತ್ತಿದ್ದಾರೆ.
ರಿವರ್ ರ‍್ಯಾಪ್ಟಿಂಗ್, ಕಯಾಕಿಂಗ್, ಮೋಟರ್ ಬೋಟ್, ಜೆಟ್ಸ್ ಕಿ, ಬನಾನಾ ರೇಡ್ ಪ್ರಕಾರದ ಸಾಹಸ ಕ್ರೀಡೆಗಳಲ್ಲಿ ಮಕ್ಕಳು, ಯುವಕ, ಯುವತಿಯರು ಸೇರಿದಂತೆ ಕುಟುಂಬಸಮೇತರಾಗಿ ಆಗಮಿಸಿ ಸಂಭ್ರಮಿಸುತ್ತಿರುವುದು ಸಾಮಾನ್ಯವಾಗಿದೆ. ಬೋಟಿಂಗ್ ಮಾಡುತ್ತಿದ್ದ ಯುವಕ ಮಾತನಾಡಿ, ನಾವು ಬೋಟಿಂಗ್ ಮಾಡಲು ದೂರದ ದಾಂಡೇಲಿಗೆ ಹೋಗಬೇಕಾಗಿತ್ತು. ಈಗ ಉತ್ಸವ ನಿಮಿತ್ತ ನಮ್ಮೂರಲ್ಲೇ ಅವಕಾಶ ಮಾಡಿಕೊಟ್ಟಿದ್ದು, ಜಲ ಸಾಹಸ ಕ್ರೀಡೆಗಳನ್ನು ಸಖತ್ ಎಂಜಾಯ್ ಮಾಡುತ್ತಿದ್ದೇವೆ. ಆದರೆ, ಈ ಕೆರೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ, ವರ್ಷಪೂರ್ತಿ ಬೋಟಿಂಗ್ ವ್ಯವಸ್ಥೆ ಮಾಡಿದರೆ ಇನ್ನೂ ಅನುಕೂಲ ಆಗುತ್ತದೆ ಎಂದು ಅಭಿಪ್ರಾಯಪಟ್ಟರು. ಉತ್ಸವ ನಿಮಿತ್ತ ಕೆರೆಯಲ್ಲಿ ಹಮ್ಮಿಕೊಂಡಿರುವ ಬೋಟಿಂಗ್ ಜನರನ್ನು ಹೆಚ್ಚು ಆಕರ್ಷಿಸುತ್ತಿದೆ.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪ ನಿರ್ದೇಶಕ ಬಿ.ಶ್ರೀನಿವಾಸ ಈಟಿವಿ ಭಾರತ ಜತೆಗೆ ಮಾತನಾಡಿ, ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ ವತಿಯಿಂದ ಆಯೋಜಿಸಿರುವ ಜಲ ಸಾಹಸ ಕ್ರೀಡೆಗಳು ಕಿತ್ತೂರು ಉತ್ಸವದಲ್ಲಿ ಅತಿ ಹೆಚ್ಚು ಜನರನ್ನು ಆಕರ್ಷಿಸುತ್ತಿವೆ. ಯುವಕರು ಉತ್ಸಾಹದಿಂದ ಜಲ ಸಾಹಸಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಮಕ್ಕಳಿಗೆ ನೀರಿನಲ್ಲಿ ಇಳಿಯುವಾಗ ಭಯ ಇರುತ್ತದೆ. ಹಾಗಾಗಿ, ಅವರಿಗೆ ಜಾಗೃತಿ ಮೂಡಿಸಿ, ಲೈಫ್ ಜಾಕೇಟ್ ಹಾಕಿ ಇಳಿಸುತ್ತಿರುವುದರಿಂದ ಮಕ್ಕಳು ಖುಷಿ ಪಡುತ್ತಿದ್ದಾರೆ. ಈವರೆಗೆ 500ಕ್ಕೂ ಹೆಚ್ಚು ಜನ ಭಾಗವಹಿಸಿದ್ದಾರೆ. ಭವಿಷ್ಯದಲ್ಲಿ ಎಲ್ಲಾ ದಿನಗಳಲ್ಲಿ ಕೆರೆಯಲ್ಲಿ ಬೋಟಿಂಗ್ ನಡೆಸುವ ಕುರಿತು ಜಿಲ್ಲಾಧಿಕಾರಿಗಳು, ಶಾಸಕರ ಜತೆಗೆ ಚರ್ಚಿಸಿ ನಿರ್ಧರಿಸಲಾಗುವುದು ಎಂದರು.
ಇದನ್ನೂ ಓದಿ: ಕಿತ್ತೂರು ಉತ್ಸವ: ಸಿರಿಧಾನ್ಯಗಳಲ್ಲಿ ಅರಳಿದ ಚನ್ನಮ್ಮನ ಮೂರ್ತಿ, ತರಕಾರಿಯಲ್ಲಿ ಆಕರ್ಷಣೀಯ ಕಲಾಕೃತಿಗಳು