ಬಿಎಂಟಿಸಿ ಇವಿ ಬಸ್ಗಳ ಫಾಸ್ಟ್ಟ್ಯಾಗ್ ಸಮಸ್ಯೆ: ಟೋಲ್ನಲ್ಲಿ ಬಸ್ಗಳ ಪರದಾಟ - ಫಾಸ್ಟ್ಯಾಗ್ ರಿನೀವಲ್
🎬 Watch Now: Feature Video
ಯಲಹಂಕ: ಇತ್ತೀಚಿನ ದಿನಗಳಲ್ಲಿ ಬಿಎಂಟಿಸಿ ಎಡವಟ್ಟಿಗೆ ಪ್ರಯಾಣಿಕರು ಪದೇ ಪದೆ ತೊಂದರೆ ಅನುಭವಿಸತ್ತಲೇ ಇದ್ದಾರೆ. ಬಸ್ಗಳ ನಿರ್ವಹಣೆ ಮಾಡಲು ಆಗದೇ ಖಾಸಗೀಕರಣಕ್ಕೆ ಮುಂದಾಗಿದ್ದ ಬಿಎಂಟಿಸಿ ಇದೀಗ ಮತ್ತೊಂದು ಎಡವಟ್ಟಿನಿಂದ ಪ್ರಯಾಣಿಕರು ಹಿಡಿಶಾಪ ಹಾಕ್ತಿದ್ದಾರೆ. ಯಲಹಂಕ ದೊಡ್ಡಬಳ್ಳಾಪುರ ರಸ್ತೆ ಮಾರಸಂದ್ರದ ಬಳಿ ಟೋಲ್ನಲ್ಲಿ ಬಿಎಂಟಿಸಿ ಇವಿ ಬಸ್ಗಳು ಎಡವಟ್ಟು ಮಾಡಿಕೊಂಡಿವೆ.
ಪರಿಸರ ಸ್ನೇಹಿ ಇವಿ ಬಸ್ಗಳ ಫಾಸ್ಟ್ಟ್ಯಾಗ್ನಲ್ಲಿ ಹಣವಿಲ್ಲದೇ ಟೋಲ್ ಬಳಿಯೇ ಬಿಎಂಟಿಸಿ ಬಸ್ಗಳನ್ನು ನಿಲ್ಲಿಸಿ ಪ್ರಯಾಣಿಕರನ್ನು ಬೇರೆ ಬಸ್ಗಳಲ್ಲಿ ಕಳುಹಿಸಿದ ಪ್ರಸಂಗ ನಡೆದಿದೆ. ಇನ್ನು ಇಲಾಖೆ ಸಿಬ್ಬಂದಿಗೆ ಸಂಬಳ ಕೊಡಲು ಈ ಹಿಂದೆ ಬಿಎಂಟಿಸಿ ಹೆಣಗಾಡಿತ್ತು. ಈಗ ಪರಿಸರ ಸ್ನೇಹಿ ಎಲೆಕ್ಟ್ರಾನಿಕ್ ಬಸ್ನಿಂದ ಪ್ರಯಾಣಿಕರಿಗೆ ಸಮಸ್ಯೆಯಾಗಿದೆ. ಅರ್ಧ ದಾರಿಯಲ್ಲೇ ಇವಿ ಬಸ್ಗಳಿಂದ ಪ್ರಯಾಣಿಕರನ್ನು ಇಳಿಸಿ ಬೇರೆ ಬಸ್ಗಳಿಗೆ ಹತ್ತಿಸುವ ಪರಿಸ್ಥಿತಿಗೆ ಬಿಎಂಟಿಸಿ ಬಂತಾ ಎಂಬ ಅನುಮಾನ ಮೂಡ್ತಿದೆ.
ಟೋಲ್ ಕಟ್ಟಲು ಹಣವಿಲ್ಲದೇ ಟೋಲ್ ಬಳಿಯೇ 15ಕ್ಕೂ ಹೆಚ್ಚು ಬಿಎಂಟಿಸಿ ಬಸ್ಗಳು ನಿಂತಿದ್ದು, ಫಾಸ್ಟ್ಸ್ಟ್ಯಾಗ್ ರಿನೀವಲ್ ಮಾಡಿಸದ ಬಿಎಂಟಿಸಿ ತಪ್ಪಿಗೆ ಪ್ರಯಾಣಿಕರಿಗೆ ಶಿಕ್ಷೆಯಾಗಿದೆ. ಬಿಎಂಟಿಸಿ ಬಸ್ಗಳಿಂದ ಇಳಿದು ಬೇರೆ ಬಸ್ಗಳನ್ನು ಹಿಡಿದು ತೆರಳುತ್ತಾ ಪ್ರಯಾಣಿಕರು ಹಿಡಿ ಶಾಪ ಹಾಕಿದ್ದಾರೆ. ನಿನ್ನೆ ಸಂಜೆ 5.30ರ ಸುಮಾರಿಗೆ ಯಲಹಂಕ ದೊಡ್ಡಬಳ್ಳಾಪುರ ರಸ್ತೆ ಮಾರಸಂದ್ರ ಟೋಲ್ ಬಳಿ ಬೆಂಗಳೂರಿಗೆ ಬರ್ತಿದ್ದ 15ಕ್ಕೂ ಹೆಚ್ಚು ಇವಿ ಬಿಎಂಟಿಸಿ ಬಸ್ಗಳನ್ನು ಫಾಸ್ಟ್ಟ್ಯಾಗ್ ನಲ್ಲಿ ಹಣವಿಲ್ಲದ ಕಾರಣ ನಿಲ್ಲಿಸಲಾಗಿತ್ತು. ಫಾಸ್ಟ್ಟ್ಯಾಗ್ ರಿಚಾರ್ಜ್ ಮಾಡದೇ ಎಡವಟ್ಟು ಮಾಡುವ ಮೂಲಕ ಬಿಎಂಟಿಸಿ ಮುಳುಗುತ್ತಿರೋ ಹಡಗು ಎಂಬುದನ್ನು ತೋರಿಸಿಕೊಟ್ಟಿದೆ. ಬಿಎಂಟಿಸಿಯ ಇಂತಹ ಸಮಸ್ಯೆ ವಿರುದ್ಧ ಪ್ರಯಾಣಿಕರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ನೂ ಟೋಲ್ ಮ್ಯಾನೇಜರ್ ರವಿಬಾಬು ಮಾತನಾಡಿ, ಇವಿ ಬಸ್ಗಳು ಕನಿಷ್ಠ ಬ್ಯಾಲೆನ್ಸ್ ಮೈಂಟೈನ್ ಮಾಡಬೇಕು. ಆದರೆ, ಅದನ್ನು ಮೈಂಟೆನ್ ಮಾಡದೇ ಬಸ್ಗಳು ಇಲ್ಲಿ ನಿಂತಿತ್ತು ಎಂದು ತಿಳಿಸಿದ್ದಾರೆ.
ಇದನ್ನೂ ನೋಡಿ: ಕಾರಿನ ಮೇಲೆ ದಾಳಿ ನಡೆಸಿದ ಕಾಡಾನೆ - ವಿಡಿಯೋ