ಚುನಾವಣೆಯಲ್ಲಿ ಸೋಲು: ಬಿಜೆಪಿ ನಾಯಕರು ಹೇಳಿದ್ದೇನು?- ವಿಡಿಯೋ - bjp leaders reaction on election result
🎬 Watch Now: Feature Video
ಬೆಂಗಳೂರು: ರಾಜ್ಯದ ಜನ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಿದ್ದಾರೆ. ನಾವು ಒಂದು ವಿಪಕ್ಷವಾಗಿ ಬರುವ ದಿನಗಳಲ್ಲಿ ಜನರ ಸಮಸ್ಯೆಗಳನ್ನು ವಿಧಾನಸೌಧದಲ್ಲಿ ಎತ್ತಿ ಹಿಡಿಯುವ ಕೆಲಸ ಮಾಡ್ತೀವಿ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು. ಬೆಂಗಳೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಒಳ್ಳೆಯ ವಿರೋಧ ಪಕ್ಷವಾಗಿ ಕೆಲಸ ಮಾಡ್ತೀವಿ. ಕಾಂಗ್ರೆಸ್‌ಗೆ ಆಲ್ ದಿ ಬೆಸ್ಟ್ ಎಂದು ಶುಭ ಕೋರಿದರು.
ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ವಿಜೇತ ಅಭ್ಯರ್ಥಿ ಉದಯ್ ಗರುಡಾಚಾರ್ ಮಾತನಾಡಿ, ಎರಡನೇ ಬಾರಿ ನನ್ನ ಕ್ಷೇತ್ರದ ಜನತೆ ನನ್ನನ್ನು ಆಯ್ಕೆ ಮಾಡಿದ್ದಾರೆ. 12 ಸಾವಿರ ಮತಗಳ ಅಂತರದಿಂದ ಗೆಲುವು ನೀಡಿದ್ದಾರೆ, ಅವರಿಗೆ ಧನ್ಯವಾದ ಅರ್ಪಿಸುತ್ತೇನೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬರಬೇಕು ಎಂಬುದು ನಮ್ಮ ಆಶಯ. ಇನ್ನೂ ಸಹ ಸಂಪೂರ್ಣ ಫಲಿತಾಂಶ ಬಂದಿಲ್ಲ, ಬಂದ ಬಳಿಕ ಮುಂದಿನದ್ದನ್ನು ನೋಡೋಣ ಎಂದರು.
ಸಾಕಷ್ಟು ಕಡೆ ಘಟಾನುಘಟಿ ಬಿಜೆಪಿ ನಾಯಕರಿಗೆ ಹಿನ್ನಡೆ ಕುರಿತು ಮಾತನಾಡಿ, ನನ್ನ ಕ್ಷೇತ್ರದಲ್ಲಿ ನಾನು ಕೆಲಸ ಮಾಡಿದ್ದೇನೆ, ಮತ್ತಷ್ಟು ಆಗಬೇಕಿರುವ ಕೆಲಸವಿದೆ. ಪ್ರತಿಯೊಬ್ಬರೂ ಸಹ ಅವರವರ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ, ಸಂಪೂರ್ಣ ಫಲಿತಾಂಶ ಬರಲಿ, ನಂತರ ನೋಡೋಣ ಎಂದು ಹೇಳಿದರು.
ಸಚಿವ ಅಶ್ವತ್ಥನಾರಾಯಣ ಮಾತನಾಡಿ, ಬಿಜೆಪಿ ರಾಜ್ಯದಲ್ಲಿ ಹಿನ್ನಡೆ ಸಾಧಿಸಿದೆ, ಇದು ತಾತ್ಕಾಲಿಕ ಕಾದು ನೋಡೋಣ ಎಂದರು. ಸಚಿವ ಗೋಪಾಲಯ್ಯ ಮಾತನಾಡಿ, ರಾಜ್ಯದ ಜನ ಎನ್ನೂ ತೀರ್ಮಾನ ಕೊಡುತ್ತಾರೆ ಅದಕ್ಕೆ ನಾವು ಬದ್ದವಾಗಿದ್ದೇವೆ, ವಿರೋಧ ಪಕ್ಷದಲ್ಲಿದ್ದು ಗಂಭೀರವಾಗಿ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.
ಇದನ್ನೂ ಓದಿ:ಕಾಂಗ್ರೆಸ್‌ಗೆ ಪ್ರಚಂಡ ಗೆಲುವು: ಡಿಕೆಶಿ ಭಾವುಕ ನುಡಿ- ವಿಡಿಯೋ