ದೇವರ ಮೊರೆ ಹೋದ ಬಿ.ವೈ. ವಿಜಯೇಂದ್ರ.. ಕೋಟೆ ಆಂಜನೇಯ ದೇವಾಲಯದಲ್ಲಿ ವಿಶೇಷ ಪೂಜೆ - shivamogga kote anjaneya temole
🎬 Watch Now: Feature Video
ಶಿವಮೊಗ್ಗ: ರಾಜ್ಯ ವಿಧಾನಸಭಾ ಚುನಾವಣೆ ಮತದಾನಕ್ಕೆ ಕೆಲವೇ ಗಂಟೆಗಳು ಬಾಕಿ ಉಳಿದಿದ್ದು, ಶಿಕಾರಿಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ. ವಿಜಯೆಂದ್ರ ಅವರು ಮಂಗಳವಾರ ಬೆಳಗ್ಗೆ ಶಿವಮೊಗ್ಗ ನಗರದಲ್ಲಿರುವ ಕೋಟೆ ಆಂಜನೇಯ ದೇವಾಲಯಕ್ಕೆ ಭೇಟಿ ನೀಡಿದ್ದರು. ಪತ್ನಿ ಪ್ರೇಮ ಅವರೊಂದಿಗೆ ಭೇಟಿ ನೀಡಿ ಆಂಜನೇಯನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಮೊದಲು ಶ್ರೀರಾಮ ದೇವರ ದರ್ಶನ ಪಡೆದ ವಿಜಯೇಂದ್ರ ದಂಪತಿಗೆ ದೇವಸ್ಥಾನದ ಅರ್ಚಕರು ಪ್ರಸಾದ ನೀಡಿ ಆಶೀರ್ವಾದ ಮಾಡಿದರು. ನಂತರ ಆಂಜನೇಯ ದೇವರ ದರ್ಶನ ಪಡೆದುಕೊಂಡರು. ದೇವಾಲಯದ ಅರ್ಚಕರಾದ ರಾಮ್ ಪ್ರಸಾದ್ ಅವರು ಆಂಜನೇಯನಿಗೆ ವಿಶೇಷ ಪೂಜೆ ಸಲ್ಲಿಸಿ ವಿಶೇಷ ಪ್ರಸಾದವನ್ನು ದಂಪತಿಗೆ ನೀಡಿದರು. ನಂತರ ದೇವಾಲಯದ ಸುತ್ತ ಪ್ರದಕ್ಷಿಣೆ ಹಾಕಿ ವಾಪಸ್ ಆದರು.
ನಾಳೆ ಮತದಾನ: ನಾಳೆ ಬೆಳಗ್ಗೆ 7 ಗಂಟೆಯಿಂದ ಸಂಜೆ 6ರ ವರೆಗೆ ರಾಜ್ಯದ 224 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಮತದಾನವಾಗಿ 2 ದಿನಗಳ ಬಳಿಕ ಅಂದ್ರೆ ಮೇ 13 ರಂದು ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಹೊರಬೀಳಲಿದೆ.
ಇದನ್ನೂ ಓದಿ: ಕರ್ನಾಟಕ ಚುನಾವಣೆಗೆ ಮತ ಹಾಕಲು ವೇತನಸಹಿತ ರಜೆ ನೀಡಿದ ಗೋವಾ ಸರ್ಕಾರ