ಆನೆ ಕಂಡ ಭಯದಲ್ಲಿ ರಸ್ತೆ ಪಕ್ಕದ ಕಾಲುವೆಗೆ ಆಯತಪ್ಪಿ ಬಿದ್ದ ಬೈಕ್ ಸವಾರ: ವಿಡಿಯೋ ವೈರಲ್ - ETV Bharath Karnataka
🎬 Watch Now: Feature Video
ಚಾಮರಾಜನಗರ: ಆನೆ ದಾಳಿ ಮಾಡುತ್ತ ಎಂಬ ಭಯದಲ್ಲಿ ಬೈಕ್ ಸವಾರ ರಸ್ತೆ ಪಕ್ಕದ ಕಾಲುವೆಗೆ ಬಿದ್ದಿರುವ ಘಟನೆ ಚಾಮರಾಜನಗರ ಗಡಿಭಾಗವಾದ ತಮಿಳುನಾಡಿನ ತಲೆಮಲೈಯಲ್ಲಿ ನಡೆದಿದೆ. ನೈನಿತಾಳಪುರಂ ಗ್ರಾಮದ ರಾಮಸ್ವಾಮಿ ಎಂಬವರು ಕಾಲುವೆಗೆ ಬಿದ್ದಿರುವ ಬೈಕ್ ಸವಾರ. ರಸ್ತೆ ಮಧ್ಯೆ ಬಂದು ನಿಂತ ಆನೆಯನ್ನು ಗಮನಿಸಿದ ರಾಮಸ್ವಾಮಿ ದಿಢೀರ್ ಬಂದಿದ್ದಾರೆ. ಆನೆ ನೋಡುತ್ತಿದ್ದಂತೆ ಆಯತಪ್ಪಿ ಬಿದ್ದಿದ್ದು, ಬಳಿಕ ಇನ್ನಿತರ ಸವಾರರ ಸಮಯಪ್ರಜ್ಞೆಯಿಂದ ಆನೆ ತಿರುಗುವ ಮುನ್ನ ಇತ್ತ ಕಡೆ ಬಂದಿದ್ದಾರೆ. ಈ ಘಟನೆ ಸೋಮವಾರ ಸಂಜೆ ನಡೆದಿದೆ ಎನ್ನಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.
ಚಾಮರಾಜನಗರ ಗಡಿಭಾಗದಲ್ಲಿ ಆನೆಗಳು ಹೆಚ್ಚಾಗಿ ಕಾಣಿಸಿಕೊಳ್ಳಯತ್ತಿವೆ. ಆದರೆ ಈವರೆಗೆ ಪ್ರಾಣಹಾನಿಯ ಬಗ್ಗೆ ವರದಿಗಳಾಗಿಲ್ಲ. ಇತ್ತೀಚೆಗಷ್ಟೇ ತಮಿಳುನಾಡಿನ ತಲೆಮಲೈಯಲ್ಲಿ ರೈಲು ಹಳಿ ದಾಟುವ ವೇಳೆ ಆನೆ ಕೂದಲೆಳೆ ಅಂತರದಲ್ಲಿ ಪಾರಾಗಿರುವುದು ಕಂಡು ಬಂದಿತ್ತು. ಕೃಷಿಗೆ ಹಾನಿ ಮಾಡುತ್ತಿದ್ದ ಆನೆಯನ್ನು ತೋಟದಿಂದ ಓಡಿಸಲಾಗುತ್ತಿತ್ತು. ಆಗ ಆನೆ ಹಳಿ ಮೇಲೆ ನಿಂತಿತ್ತು. ರೈಲು ಬರುತ್ತಿರುವುದನ್ನು ಗಮನಿಸಿದ ಅರಣ್ಯ ಇಲಾಖೆಯ ಸಿಬ್ಬಂದಿ ತಕ್ಷಣವೇ ಆನೆಯನ್ನು ಓಡಿಸಿ ಪ್ರಾಣ ಉಳಿಸಿದ್ದರು.
ಇದನ್ನೂ ಓದಿ: ಕೂದಲೆಳೆ ಅಂತರದಲ್ಲಿ ರೈಲು ಡಿಕ್ಕಿಯಿಂದ ಆನೆ ಪಾರು.. ವಿಡಿಯೋ