ಬೆಂಗಳೂರು-ಹೊಸೂರು ಹೆದ್ದಾರಿಯಲ್ಲಿ ಪುಂಡರ ನೈಟ್ ಜಾಲಿ ವ್ಹೀಲಿಂಗ್- ವಿಡಿಯೋ - bangalore
🎬 Watch Now: Feature Video
ಬೆಂಗಳೂರು: ಇಂದು ಮುಂಜಾನೆ 4 ಗಂಟೆಯ ಸುಮಾರಿಗೆ ಯುವಕರ ತಂಡವೊಂದು ಹೆದ್ದಾರಿಯಲ್ಲಿ ಬೈಕ್ ವ್ಹೀಲಿಂಗ್ ಮಾಡಿದ್ದಾರೆ. ಬೆಂಗಳೂರು-ಹೊಸೂರು ರಾಷ್ಟ್ರೀಯ ಹೆದ್ದಾರಿಯ ಬೊಮ್ಮಸಂದ್ರ ಡಿಮಾರ್ಟ್ ಮುಂಭಾಗದ ಮೇಲ್ಸೇತುವೆ ಮೇಲೆ ಮೂರ್ನಾಲ್ಕು ಯುವಕರು ಪ್ರತ್ಯೇಕ ಬೈಕ್ಗಳಲ್ಲಿ ಅಪಾಯಕಾರಿ ಜಾಲಿ ರೈಡಿಂಗ್ ನಡೆಸಿದ್ದು ವಿಡಿಯೋ ಲಭ್ಯವಾಗಿದೆ.
ವ್ಹೀಲಿಂಗ್ ಮಾಡುವುದನ್ನು ಮೊಬೈಲ್ನಲ್ಲಿ ಸೆರೆ ಹಿಡಿಯಲು ಆರಭಿಸುತ್ತಿದ್ದಂತೆ ಮೂವರು ಯುವಕರು ವೇಗವಾಗಿ ಪರಾರಿಯಾಗಿದ್ದಾರೆ. ಇವರಲ್ಲಿ ಓರ್ವ ಯುವಕ ಚಂದಾಪುರದಿಂದ ಆಚೆಗೂ ಹೆದ್ದಾರಿಯಲ್ಲಿ ವ್ಹೀಲಿಂಗ್ ಮಾಡುತ್ತಾ ಸಾಗಿದ್ದಾನೆ. ಸಾಮಾನ್ಯವಾಗಿ ಈ ವೇಳೆಯಲ್ಲಿ ನಿದ್ರೆ ಮಂಪಿನಲ್ಲಿರುವ ಬಾರಿ ಪ್ರಮಾಣದ ವಾಹನ ಸವಾರರಿಗೆ ಚಮಕ್ ಕೊಡುವ ಈ ಯುವಕರು ಅಪಘಾತಕ್ಕೆ ಕಾರಣರಾಗುತ್ತಾರೆ.
ಹೆದ್ದಾರಿಯಲ್ಲಿ ಪುಂಡರು ಬೈಕ್ ಸ್ಟಂಟ್ ಹಾಗೂ ವ್ಹೀಲಿಂಗ್ ಮಾಡುವುದರಿಂದ ರಸ್ತೆಯಲ್ಲಿ ಸಂಚರಿಸುವ ಇತರೆ ವಾಹನ ಸವಾರರಿಗೂ ತೊಂದರೆಯಾಗುತ್ತದೆ. ಪೊಲೀಸರು ವ್ಹೀಲಿಂಗ್ಗೆ ಕಡಿವಾಣ ಹಾಕಲು ಎಷ್ಟೇ ಕಠಿಣ ಕ್ರಮಗಳನ್ನು ಕೈಗೊಂಡರೂ ಪೂರ್ಣ ಪ್ರಮಾಣದಲ್ಲಿ ಇಂಥ ಅಟ್ಟಹಾಸ ನಿಲ್ಲುತ್ತಿಲ್ಲ ಎಂಬುದೇ ವಿಪರ್ಯಾಸ. ಈ ಕುರಿತು ಇತರೆ ಸವಾರರು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: ಇಬ್ಬರು ಯುವತಿಯರನ್ನು ಕೂರಿಸಿಕೊಂಡು ಅಪಾಯಕಾರಿ ಬೈಕ್ ಸ್ಟಂಟ್, ಆರೋಪಿ ಸೆರೆ- ವಿಡಿಯೋ