ಬೈಕ್ ಸ್ಕಿಡ್ ಆಗಿ ಡಿವೈಡರ್ಗೆ ಬಡಿದು ಭೀಕರ ಅಪಘಾತ: ಇಂಜಿನಿಯರಿಂಗ್ ವಿದ್ಯಾರ್ಥಿ ಸಾವು - Bike skidded and hit the divider
🎬 Watch Now: Feature Video
ಮಂಗಳೂರು: ಬೈಕ್ ಸ್ಕಿಡ್ ಆಗಿ ಬಿದ್ದು ಗಂಭೀರವಾಗಿ ಗಾಯಗೊಂಡು ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಘಟನೆ ಮಂಗಳೂರು ಹೊರವಲಯದ ಅಡ್ಯಾರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ನಡೆದಿದೆ. ಅಪಘಾತದ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೇರಳ ಮೂಲದ, ವಳಚ್ಚಿಲ್ ಶ್ರೀನಿವಾಸ್ ಕಾಲೇಜಿನ ಇಂಜಿನಿಯರಿಂಗ್ ವಿದ್ಯಾರ್ಥಿ ಮುಹಮ್ಮದ್ ನಶತ್(21) ಮೃತಪಟ್ಟ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ.
ಬುಧವಾರ ಮಧ್ಯಾಹ್ನ 11.40 ರ ವೇಳೆಗೆ ಈ ಘಟನೆ ನಡೆದಿದೆ. ನಶತ್ ಪಡೀಲ್ ನಿಂದ ವಲಚ್ಚಿಲ್ ಕಡೆಗೆ ಅತಿವೇಗದಲ್ಲಿ ಬೈಕ್ ಚಲಾಯಿಸಿಕೊಂಡು ಬರುತ್ತಿದ್ದ. ಈ ವೇಳೆ ಬೈಕ್ ಸ್ಕಿಡ್ ಆಗಿ ಡಿವೈಡರ್ಗೆ ಬಡಿದು ಅಪಘಾತ ಸಂಭವಿಸಿದೆ. ಬೈಕ್ ಮತ್ತು ಸವಾರ ಮೇಲಕ್ಕೆ ಚಿಮ್ಮಿ ವಿದ್ಯುತ್ ಕಂಬಕ್ಕೆ ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಅಪಘಾತದ ರಭಸಕ್ಕೆ ನಶತ್ ತಲೆ ಛಿದ್ರಗೊಂಡಿದೆ. ಅಪಘಾತದ ಭೀಕರ ದೃಶ್ಯ ಪಕ್ಕದಲ್ಲೇ ಇದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಇದನ್ನೂ ನೋಡಿ: ಫ್ಲೈಓವರ್ ಮೇಲೆ ನಿಂತು ಅಪಘಾತ ವೀಕ್ಷಿಸುತ್ತಿದ್ದವರಿಗೆ 160 ಕಿಮೀ ವೇಗದಲ್ಲಿ ಬಂದು ಗುದ್ದಿದ ಕಾರು; 9 ಮಂದಿ ದಾರುಣ ಸಾವು!