ಹಾಫ್ ಹೆಲ್ಮೆಟ್ ಧರಿಸಿದ ಸವಾರರಿಗೆ ದಂಡ ಹಾಕದೇ ಪೊಲೀಸರಿಂದ ಜಾಗೃತಿ
🎬 Watch Now: Feature Video
ಶಿವಮೊಗ್ಗ: ಜೀವಹಾನಿ ತಡೆಗೆ ಬೈಕ್ ಸವಾರರು ಕಡ್ಡಾಯವಾಗಿ ಐಎಸ್‌ಐ ಮಾರ್ಕ್ ಅಥವಾ ಕಿವಿ ಮುಚ್ಚುವ ಹೆಲ್ಮೆಟ್ ಧರಿಸಬೇಕೆಂದು ಸಾಗರ ಪೊಲೀಸರು ಜಾಗೃತಿ ಮೂಡಿಸುತ್ತಿದ್ದಾರೆ. ಬೈಕ್ ಸವಾರರನ್ನು ತಪಾಸಣೆ ನಡೆಸಿ, ಹಾಫ್ ಹೆಲ್ಮೆಟ್ ವಶಕ್ಕೆ ಪಡೆದ ಸಾಗರ ಪೊಲೀಸರು, ದಂಡ ಕಟ್ಟುವ ಹಣದಲ್ಲಿ ಹೊಸ ಐಎಸ್ಐ ಹೆಲ್ಮೆಟ್ ಧರಿಸುವಂತೆ ಸೂಚಿಸಿ ಕಳುಹಿಸುತ್ತಿದ್ದಾರೆ.
ಸಾಗರ ಉಪ ವಿಭಾಗದಲ್ಲಿ ಕಳೆದ 3 ವರ್ಷದಲ್ಲಿ ಸುಮಾರು 78 ಮಾರಣಾಂತಿಕ ರಸ್ತೆ ಅಪಘಾತಗಳಾಗಿವೆ. 351 ಸಾಮಾನ್ಯ ಅಪಘಾತ ಪ್ರಕರಣಗಳು ನಡೆದಿವೆ. 80 ಜನರು ಸಾವನ್ನಪ್ಪಿದ್ದಾರೆ. ಕಳೆದೊಂದು ವಾರದಲ್ಲಿ 200ಕ್ಕೂ ಹೆಚ್ಚು ಹಾಫ್ ಹೆಲ್ಮೆಟ್ ಅನ್ನು ವಶಕ್ಕೆ ಪಡೆಯಲಾಗಿದೆ. ಹೀಗೆ ವಶಕ್ಕೆ ಪಡೆದ ಹೆಲ್ಮೆಟ್‌ಗಳನ್ನು ಪೊಲೀಸರು ನಾಶಪಡಿಸಿದ್ದಾರೆ.
ಸಾಗರದ ಪ್ರೊಬೇಷನರಿ ಎಸ್ಪಿ ರೋಹನ್ ಜಗದೀಶ್ ನೇತೃತ್ವದಲ್ಲಿ ಪೊಲೀಸರು ಸಾರ್ವಜನಿಕರಿಗೆ ಐಎಸ್ಐ ಹಾಗೂ ಬೆಲ್ಟ್ ಇರುವ ಹೆಲ್ಮೆಟ್‌ನಿಂದಾಗುವ ಅನುಕೂಲ ಹಾಗೂ ಶಿರ ರಕ್ಷಣೆ ಕುರಿತು ಮಾಹಿತಿ ನೀಡಿದರು. ಬೆಲ್ಟ್ ಇಲ್ಲದ ಹೆಲ್ಮೆಟ್‌ನಿಂದಾಗುವ ಅನಾಹುತವನ್ನು ಪ್ರಾತ್ಯಕ್ಷಿಕೆ ಮೂಲಕ ತೋರಿಸಲಾಯಿತು. ಹಾಫ್ ಹೆಲ್ಮೆಟ್ ಧರಿಸಿದರೂ ಅವರನ್ನು ಹೆಲ್ಮೆಟ್ ಧರಿಸಿಲ್ಲ ಎಂದೇ ಪರಿಗಣಿಸಿ ದಂಡ ವಿಧಿಸಲಾಗುವುದು. ದೇಶದಲ್ಲಿ ದ್ವಿಚಕ್ರ ವಾಹನಗಳ ಸವಾರ ಹಾಗೂ ಹಿಂಬದಿ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಎಂದು ಪೊಲೀಸರು ತಿಳಿಸಿದರು.
ಇದನ್ನೂಓದಿ: ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯಗೆ ಭಜರಂಗಿ ಬಲ.. ಮಾಜಿ ಸಿಎಂ ಪರ ಶಿವಣ್ಣ ಭರ್ಜರಿ ಪ್ರಚಾರ