ಕಟ್ನೂರು ಗ್ರಾಮ ದೇವತೆ ಜಾತ್ರಾ ಮಹೋತ್ಸವ : ಹೊನ್ನಾಟದಲ್ಲಿ ಮಿಂದೆದ್ದ ಭಕ್ತರು - ಈಟಿವಿ ಭಾರತ ಕನ್ನಡ
🎬 Watch Now: Feature Video
ಹುಬ್ಬಳ್ಳಿ : ಇಲ್ಲಿನ ಕಟ್ನೂರು ಗ್ರಾಮದಲ್ಲಿ ಜಾತ್ರೆಯ ಅಂಗವಾಗಿ ಭಂಡಾರದ ಹೊನ್ನಾಟ ಹಾಗೂ ಗ್ರಾಮದೇವಿಯ ಮೆರವಣಿಗೆ ಅದ್ಧೂರಿಯಾಗಿ ಜರುಗಿತು. ಕಟ್ನೂರಿನಲ್ಲಿ ಮೊಟ್ಟ ಮೊದಲ ಬಾರಿಗೆ ಗ್ರಾಮದೇವಿಯ ಜಾತ್ರೆಯನ್ನು ಹಮ್ಮಿಕೊಳ್ಳಲಾಗಿದ್ದು, ಐದು ದಿನಗಳ ಕಾಲ ಜಾತ್ರೆ ನಡೆಯುತ್ತದೆ. ಈ ವೇಳೆ ಯಾವುದೇ ಜಾತಿ, ಲಿಂಗ ಭೇದ ಇಲ್ಲದೆ ಭಂಡಾರದ ಹೊನ್ನಾಟವನ್ನು ಆಡಲಾಗುತ್ತದೆ. ಯುವಕ ಯುವತಿಯರು, ಮಹಿಳೆಯರು, ಮಕ್ಕಳು ಭಂಡಾರ ಎರಚುವ ಮೂಲಕ ಹೊನ್ನಾಟ ಆಡುತ್ತಾರೆ. ಮೆರವಣಿಗೆಯ ಸಂದರ್ಭದಲ್ಲಿ ಯುವಕ ಯುವತಿಯರು ಡಿಜೆ ಹಾಡಿಗೆ ಕುಣಿದು ಕುಪ್ಪಳಿಸಿದರು.
ಇದನ್ನೂ ಓದಿ : ಕುಟುಂಬ ಸಮೇತರಾಗಿ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ಬಿ ವೈ ವಿಜಯೇಂದ್ರ..
ಹೊನ್ನಾಟ ಆಡುವ ಮೂಲಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಗ್ರಾಮ ದೇವತೆಯನ್ನು ಮೆರವಣಿಗೆ ಮಾಡಲಾಯಿತು. ಐದು ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಗ್ರಾಮದೇವತೆಗೆ ವಿಶೇಷ ಪೂಜೆ ಪುನಸ್ಕಾರಗಳು ನಡೆಯುತ್ತವೆ. ಸಾವಿರಾರು ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಇದನ್ನೂ ಓದಿ : ಮತ್ತೊಮ್ಮೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಲೆಂದು ಕುರುಬ ಸಮಾಜದ ಮುಖಂಡರಿಂದ ವಿಶೇಷ ಪೂಜೆ