ದೇವನಹಳ್ಳಿ: ಲಾರಿ ಹಿಂಬದಿಗೆ ಬೆನ್ಜ್ ಕಾರು ಡಿಕ್ಕಿ; ಇಬ್ಬರಿಗೆ ಗಂಭೀರ ಗಾಯ- ಸಿಸಿಟಿವಿ ವಿಡಿಯೋ - ಕಾರು ಪಲ್ಟಿ
🎬 Watch Now: Feature Video
Published : Oct 15, 2023, 3:44 PM IST
|Updated : Oct 15, 2023, 4:26 PM IST
ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ) : ಅತಿವೇಗ ಅಪಘಾತಕ್ಕೆ ಆಹ್ವಾನ ಎಂಬ ಎಚ್ಚರಿಕೆಯ ಮಾತಿನಂತೆ ಅತಿವೇಗದಲ್ಲಿ ತೆರಳುತ್ತಿದ್ದ ಬೆನ್ಜ್ ಕಾರೊಂದು ಲಾರಿ ಹಿಂಬದಿಗೆ ಡಿಕ್ಕಿ ಹೊಡೆದು ಭೀಕರ ರಸ್ತೆ ಅಪಘಾತ ಸಂಭವಿಸಿರುವ ಘಟನೆ ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ತಾಲೂಕಿನ ರಾಷ್ಟ್ರೀಯ ಹೆದ್ದಾರಿ ವಿಶ್ವನಾಥಪುರ ಬಳಿ ಸಂಭವಿಸಿದೆ.
ದೇವನಹಳ್ಳಿ ಕಡೆಯಿಂದ ಕಾರು ವೇಗವಾಗಿ ದೊಡ್ಡಬಳ್ಳಾಪುರ ಕಡೆ ಬರುತ್ತಿತ್ತು. ಈ ಸಂದರ್ಭದಲ್ಲಿ ನಿಯಂತ್ರಣ ಕಳೆದುಕೊಂಡು ಲಾರಿಯ ಹಿಂಬದಿಗೆ ಗುದ್ದಿದೆ. ಪರಿಣಾಮ ಕಾರು ರಸ್ತೆ ಡಿವೈಡರ್ಗೆ ಅಪ್ಪಳಿಸಿದ್ದು, ಪಲ್ಟಿಯಾಗಿದೆ. ಕಾರ್‌ನ ಏರ್‌ಬ್ಯಾಗ್ ತಕ್ಷಣ ತೆರೆದ ಹಿನ್ನೆಲೆಯಲ್ಲಿ ಪ್ರಾಣಾಪಾಯ ತಪ್ಪಿದೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.
ಕಾರಿನಲ್ಲಿದ್ದ ಬೆಂಗಳೂರು ಮೂಲದ ಇಬ್ಬರಿಗೆ ಗಂಭೀರ ಗಾಯಗಳಾಗಿದೆ. ದೊಡ್ಡಬಳ್ಳಾಪುರ ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ವಿಶ್ವನಾಥಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ. ಹೆದ್ದಾರಿಯಲ್ಲಿ ಅತ್ಯಂತ ವೇಗವಾಗಿ ವಾಹನ ಚಲಾಯಿಸುತ್ತಿರುವುದು ಇಂಥ ಅವಘಡಗಳಿಗೆ ಕಾರಣವಾಗುತ್ತಿದೆ.
ಇದನ್ನೂ ಓದಿ: ಬೆಂಗಳೂರಲ್ಲಿ ಟ್ರಾನ್ಸ್‌ಫಾರ್ಮರ್ ಸ್ಫೋಟದಿಂದ ಅಗ್ನಿ ಅವಘಡ.. ಮನೆ, ಗುಜರಿ ಅಂಗಡಿ ಸೇರಿ ವಾಹನಗಳು ಬೆಂಕಿಗಾಹುತಿ
TAGGED:
ಅತಿವೇಗ ಅಪಘಾತಕ್ಕೆ ಆಹ್ವಾನ