ಬೀರಲಿಂಗೇಶ್ವರ ಜಾತ್ರೆ : ಖಡ್ಗದಿಂದ ಅಕ್ಕಿ ತುಂಬಿದ ಬಿಂದಿಗೆ ಎತ್ತುವ ಪದ್ದತಿ - Etv Bharat Kannada
🎬 Watch Now: Feature Video
ವಿಜಯಪುರ: ಜಿಲ್ಲೆಯ ದೇವರ ನಾಡು ಎಂದೇ ಕರೆಯಲ್ಪಡುವ ದೇವರ ಹಿಪ್ಪರಗಿ ತಾಲೂಕಿನ ಆಲಗೂರ ಗ್ರಾಮದಲ್ಲಿ ಬೀರಲಿಂಗೇಶ್ವರ ಜಾತ್ರೆ ಅದ್ದೂರಿಯಾಗಿ ನೆರವೇರಿತು. ರೇವಣ ಸಿದ್ಧೇಶ್ವರ ಹೊಕ್ರಾಣಿ ಎಂಬ ಪೂಜಾರಿ ಬಿಂದಿಗೆಯೊಂದರಲ್ಲಿ ಅಕ್ಕಿ ತುಂಬಿ ಅದರ ಮಧ್ಯದಲ್ಲಿ ಖಡ್ಗ ಚುಚ್ಚಿ ನಂತರ ಆ ಬಿಂದಿಗೆಯನ್ನು ಖಡ್ಗದ ಮೂಲಕ ಮೇಲುತ್ತಿದರು. ಅಕ್ಕಿ ತುಂಬಿದ ಈ ಬಿಂದಿಗೆ ಖಡ್ಗದಿಂದ ಮೇಲೆತ್ತುವ ಮುನ್ನ ದೇವರ ಸ್ಮರಣೆ ಮಾಡಿದರೆ ಖಡ್ಗದೊಂದಿಗೆ ಬಿಂದಿಗೆ ಸುಲಭವಾಗಿ ಮೇಲೇಳುತ್ತದೆ ಎಂಬುದು ಗ್ರಾಮದ ಜನರ ನಂಬಿಕೆ.
ವಾದ್ಯ, ಮೇಳಗಳೊಂದಿಗೆ ಅಕ್ಕಿ ತುಂಬಿದ ಬಿಂದಿಗೆಯನ್ನು ಹಿಡಿದು ಪೂಜಾರಿ ರೇವಣ ಸಿದ್ಧೇಶ್ವರ ಹೊಕ್ರಾಣಿ, ಬೀರಲಿಂಗೆಶ್ವರ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಬಳಿಕ ಗ್ರಾಮದ ಜನರು ಬಣ್ಣದಾಟ ಆಡುತ್ತಾರೆ. ಇದು ಪೂಜಾರಿ ರೇವಣಸಿದ್ದ ಹೊಕ್ರಾಣಿ ಮತ್ತು ಬೀರಲಿಂಗೇಶ್ವರ ದೇವರ ಪವಾಡ ಎಂಬುದು ಜನರ ನಂಬಿಕೆಯಾಗಿದೆ. ಜಾತ್ರೆಗೆ ಗ್ರಾಮದ ಜನ ಸೇರಿದಂತೆ ಸುತ್ತಲು ಊರುಗಳಿಂದ ಹಲವರು ಬಂದು ಪಾಲ್ಗೊಳ್ಳುತ್ತಾರೆ. ಹೋಳಿ ಹುಣ್ಣಿಮೆಯಂದೂ ಸಹ ಬಿಂದಿಗೆ ಎತ್ತುವ ಆಚರಣೆ ಗ್ರಾಮದಲ್ಲಿದೆ.
ಇದನ್ನೂ ಓದಿ: ಕಾವೇರಿ ತೀರ್ಥವನ್ನು ಹಣಕ್ಕೆ ಮಾರಾಟ ಮಾಡುವ ಇ-ಪ್ರಸಾದ ಯೋಜನೆ ಕೈ ಬಿಡುವಂತೆ ಒತ್ತಾಯ