ದಾವಣಗೆರೆಯಲ್ಲಿ ದೇವಸ್ಥಾನಕ್ಕೆ ನುಗ್ಗಿದ ಕರಡಿ: ಸಿಸಿಟಿವಿ ದೃಶ್ಯ - Bear entered temple in davanagere
🎬 Watch Now: Feature Video
ದಾವಣಗೆರೆ : ಆಹಾರ ಅರಸಿ ಕಾಡುಪ್ರಾಣಿಗಳು ನಾಡಿಗೆ ಬರುತ್ತಿರುವ ಘಟನೆಗಳು ಆಗಾಗ್ಗೆ ವರದಿಯಾಗುತ್ತಲೇ ಇರುತ್ತವೆ. ಜಿಲ್ಲೆಯ ಜಗಳೂರು ತಾಲೂಕಿನ ಖಿಲಾಕಣ್ವಕುಪ್ಪೆ ಗ್ರಾಮದಲ್ಲಿರುವ ಮಾರಮ್ಮ ದೇವಸ್ಥಾನಕ್ಕೆ ಪ್ರತಿದಿನ ಕರಡಿಯೊಂದು ಆಗಮಿಸುತ್ತಿದ್ದು, ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಕರಡಿ ದೇವಸ್ಥಾನಕ್ಕೆ ನುಗ್ಗಿರುವ ದೃಶ್ಯ ದೇವಸ್ಥಾನದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪ್ರತಿದಿನ ತಡರಾತ್ರಿ ದೇವಸ್ಥಾನಕ್ಕೆ ಆಗಮಿಸುವ ಕರಡಿಗೆ ಬೆದರಿ ಜನರು ಹೊರಗಡೆ ತೆರಳಲು ಭಯಪಡುವಂತಾಗಿದೆ.
ಮಾರಮ್ಮ ದೇವಸ್ಥಾನ ಇತಿಹಾಸ ಪ್ರಸಿದ್ದ ದೇವಾಲಯ. ಇಲ್ಲಿಗೆ ಹರಕೆ ಸಲ್ಲಿಸಲು ನೂರಾರು ಭಕ್ತರು ಆಗಮಿಸುತ್ತಾರೆ. ಕೆಲವು ಭಕ್ತರು ಪೂಜೆ ನಿಮಿತ್ತ ದೇವಸ್ಥಾನದಲ್ಲಿ ವಾಸ್ತವ್ಯ ಹೂಡುತ್ತಿದ್ದು, ಸರಿಯಾದ ರಕ್ಷಣೆ ಇಲ್ಲದಿರುವುದು ಭಕ್ತರ ಬೇಸರಕ್ಕೆ ಕಾರಣವಾಗಿದೆ.
ಈ ಹಿಂದೆಯೂ ಗ್ರಾಮದಲ್ಲಿ ಕರಡಿಗಳು ಅನೇಕರ ಮೇಲೆ ದಾಳಿಗಳು ನಡೆಸಿದ್ದು, ರಂಗಯ್ಯನ ದುರ್ಗ ಕೊಂಡುಕುರಿ ವನ್ಯಜೀವಿ ಅರಣ್ಯಾಧಿಕಾರಿಗಳ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರು ಹಿಡಿಶಾಪ ಹಾಕುತ್ತಿದ್ದಾರೆ. ರಂಗಯ್ಯನದುರ್ಗ ಕೊಂಡುಕುರಿ ವನ್ಯಜೀವಿ ಅಭಯಾರಣ್ಯ ಪ್ರದೇಶದಲ್ಲಿ ಖಿಲಾಕಣ್ವಕುಪ್ಪೆ ಗ್ರಾಮ ಇರುವುದರಿಂದ ವನ್ಯಜೀವಿಗಳ ಹಾವಳಿ ಹೆಚ್ಚಾಗಿದೆ.
ಇದನ್ನೂ ಓದಿ : Viral video: ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ಪವಾಡ ಸದೃಶ್ಯ ರೀತಿ ಮಹಿಳೆ ಪಾರು