ಬಂಡೀಪುರ: ಹೊಸ ವರ್ಷಕ್ಕೆ ಅರಣ್ಯ ಇಲಾಖೆಯ ವಸತಿ ಗೃಹಗಳು ಬಂದ್ - etv bharat karnataka
🎬 Watch Now: Feature Video
Published : Dec 24, 2023, 3:45 PM IST
|Updated : Dec 24, 2023, 5:51 PM IST
ಚಾಮರಾಜನಗರ: ಡಿಸೆಂಬರ್ 31 ಹಾಗೂ ಜನವರಿ 1ರಂದು ಪ್ರವಾಸಿಗರಿಗೆ ಪ್ರಸಿದ್ಧ ವನ್ಯಜೀವಿ ತಾಣ ಬಂಡೀಪುರದಲ್ಲಿ ವಸತಿ ಗೃಹಗಳನ್ನು ನೀಡದಿರಲು ಅರಣ್ಯ ಇಲಾಖೆ ನಿರ್ಧರಿಸಿದೆ. ಇಲಾಖೆಯ ವಸತಿ ಗೃಹಗಳಲ್ಲಿ ವಾಸ್ತವ್ಯ ಹೂಡಲಷ್ಟೇ ನಿರ್ಬಂಧ ಹೇರಲಾಗಿದೆ. ಸಫಾರಿ ಎಂದಿನಂತೆ ಇರಲಿದೆ.
ಖಾಸಗಿ ರೆಸಾರ್ಟ್‌ಗಳಲ್ಲಿ ಯಾವುದೇ ನಿರ್ಬಂಧ ಇಲ್ಲ. ಆದರೆ ಪರಿಸರ ಸೂಕ್ಷ್ಮ ವಲಯದಲ್ಲಿರುವ ಹೋಂ ಸ್ಟೇ, ರೆಸಾರ್ಟ್‌ಗಳಲ್ಲಿ ಡಿಜೆ, ಪಟಾಕಿ ಸಿಡಿಸುವುದು, ಲೈಟಿಂಗ್ ಸೇರಿದಂತೆ ಇತರೆ ಚಟುವಟಿಕೆಗಳಿಗೆ ನಿರ್ಬಂಧ ಹೇರುವ ಸಾಧ್ಯತೆ ಇದೆ.
ಸಾಮಾನ್ಯವಾಗಿ ನಗರದ ಗೌಜಿ-ಗದ್ದಲದ ನಡುವೆ ಬದುಕು ಕಟ್ಟಿಕೊಂಡಿದ್ದ ಬಹುತೇಕ ಮಂದಿ ವರ್ಷಾಂತ್ಯದಲ್ಲಿ ನಿಸರ್ಗದ ನಡುವೆ ಒಂದಷ್ಟು ಸಮಯ ಕಳೆಯುವುದರೊಂದಿಗೆ ವರ್ಷಾಚರಣೆ ಮಾಡುವ ಸಲುವಾಗಿ ಬಂಡೀಪುರದತ್ತ ದಂಡು ಆಗಮಿಸುತ್ತಿತ್ತು. ಹೀಗೆ ಬರುವ ಪ್ರವಾಸಿಗರಿಗೆ ಬಂಡೀಪುರ ಅರಣ್ಯ ಇಲಾಖೆಗೊಳಪಡುವ ವಸತಿ ಗೃಹಗಳಲ್ಲಿ ಡಿ.31ರಂದು ಹೊರತುಪಡಿಸಿ ಉಳಿದ ದಿನಗಳಲ್ಲಿ ತಂಗಲು ಅವಕಾಶ ಮಾಡಿಕೊಡಲಾಗುತ್ತಿತ್ತು.
ಆದರೆ ಈ ಬಾರಿ ತಂಗಲು ಅವಕಾಶ ನೀಡಿಲ್ಲ. ಅರಣ್ಯ ಇಲಾಖೆಯ ಈ ನಿರ್ಧಾರಕ್ಕೆ ಪ್ರವಾಸಿಗರು ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಅದ್ಧೂರಿ ಹನುಮಮಾಲಾ ವಿರಮಣ: ಅಂಜನಾದ್ರಿಯಲ್ಲಿ ಭಕ್ತಸಾಗರ