ನೀರು ಕುಡಿಯಲು ಬಂದು ಟ್ಯಾಂಕ್‌ಗೆ ಬಿದ್ದ ಜಿಂಕೆ ಮರಿ ರಕ್ಷಣೆ - ಈಟಿವಿ ಭಾರತ್ ಕನ್ನಡ ಸುದ್ದಿ
🎬 Watch Now: Feature Video
ಧಾರವಾಡ: ಕಾಡಿನಿಂದ ನೀರಿಗಾಗಿ ಬಂದ ಜಿಂಕೆ ಮರಿ ಟ್ಯಾಂಕ್ ಗೆ ಬಿದ್ದ ಘಟನೆ ಧಾರವಾಡದ ಸತ್ತೂರಿನ ಶ್ರೇಯಾ ಕಾಲೇಜಿನ ಆವರಣದಲ್ಲಿ ನಡೆದಿದೆ. ಜಿಂಕೆ ಮರಿ ತನ್ನ ದಾಹ ತೀರಿಸಿಕೊಳ್ಳಲು ಬಂದಿತ್ತು. ಈ ವೇಳೆ, ಸ್ಥಳೀಯರು ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ಮುಟ್ಟಿಸಿದ್ದಾರೆ.
ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಉಪವಲಯ ಅರಣ್ಯಾಧಿಕಾರಿ ಯಲ್ಲಾನಾಯಕ ಲಮಾಣಿ, ಪ್ರಾಣಿಪ್ರಿಯ ಸೋಮಶೇಖರ ಚೆನ್ನಶೆಟ್ಟಿ ಹಾಗೂ ವೈದ್ಯ ಸತೀಶ ಇರಕಲ್ ಅವರು ಜಿಂಕೆ ಮರಿಯನ್ನು ರಕ್ಷಣೆ ಮಾಡಿ ಮತ್ತೆ ಅದನ್ನು ಸುರಕ್ಷಿತವಾಗಿ ಕಾಡಿಗೆ ಬಿಟ್ಟು ಬಂದಿದ್ದಾರೆ. ದಾಹ ತೀರಿಸಿಕೊಳ್ಳಲು ಬಂದಿದ್ದ ಜಿಂಕೆ ಮರಿ ಆಯತಪ್ಪಿ ಟ್ಯಾಂಕ್‌ಗೆ ಬಿದ್ದಿತ್ತು. ವಿಷಯ ತಿಳಿದ ಮೂವರು ಐದು ವರ್ಷದ ಜಿಂಕೆ ಮರಿಯನ್ನು ರಕ್ಷಿಸಿ ಸುರಕ್ಷಿತವಾಗಿ ಕಾಡಿಗೆ ಬಿಟ್ಟು ಬಂದಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಕಾಡಿನಿಂದ ನಾಡಿಗೆ ಪ್ರಾಣಿಗಳು ಹೆಚ್ಚಾಗಿ ಬರುತ್ತಿವೆ. ಈ ಹಿಂದೆ ಕೂಡ ಕವಿವಿ ಆವರಣದ ಹಿಂಭಾಗದಲ್ಲಿ ಆನೆಗಳು ಹಿಂಡು ಕಂಡು ಬಂದಿತ್ತು. ಅವುಗಳನ್ನು ಸಹ ಅರಣ್ಯ ಇಲಾಖೆ ಅಧಿಕಾರಿಗಳು ಸುರಕ್ಷಿತವಾಗಿ ಕಾಡಿಗೆ ಅಟ್ಟಿದ್ದರು.
ಇದನ್ನೂ ಓದಿ : ತೋಟಕ್ಕೆ ಭೇಟಿ ನೀಡಿದ ಶಾಸಕಿ ಅಂಜಲಿ ನಿಂಬಾಳ್ಕರ್: ರೈತರಿಂದ ಗೆಣಸು ಬೆಳೆಯ ಬಗ್ಗೆ ಮಾಹಿತಿ ಸಂಗ್ರಹ