ಡಿಕೆಶಿ ಕಿವಿಯಿಂದ ಚೆಂಡು ಹೂವು ತೆಗೆದ ಬಿಎಸ್ವೈ: ವಿಡಿಯೋ - ಈಟಿವಿ ಭಾರತ್ ಕನ್ನಡ ಸುದ್ದಿ
🎬 Watch Now: Feature Video
ಬೆಂಗಳೂರು: ಬಜೆಟ್ ವಿರೋಧಿಸಿ ವಿಧಾನಸೌಧಕ್ಕೆ ಆಗಮಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಮ್ಮ ಕಿವಿಗಿಟ್ಟಿದ್ದ ಹೂವನ್ನು ಮಾಜಿ ಸಿಎಂ ಯಡಿಯೂರಪ್ಪ ತೆಗೆದ ಘಟನೆ ನಡೆಯಿತು. ಬಳಿಕ ಮತ್ತೆ ಹೂವನ್ನು ಬಿಎಸ್ವೈ ಕೈಯಿಂದ ತೆಗೆದುಕೊಂಡ ಡಿಕೆಶಿ ಕಿವಿಗೆ ಮುಡಿದುಕೊಂಡರು. ಕಾಂಗ್ರೆಸ್ ನಾಯಕರ ನಡೆ ಟೀಕಿಸಿದ ಸಚಿವ ಅಶ್ವತ್ಥ್ ನಾರಾಯಣ್, "ಕಿವಿಗೆ ಹೂ ಮುಡಿದು ಬರುವ ಮೂಲಕ ಅವರು ನಗೆಪಾಟಲಿಗೀಡಾಗಿದ್ದಾರೆ. ಬೇರೆ ಯಾರಿಗೂ ಇಟ್ಟಿಲ್ಲ, ಅವರಿಗೆ ಅವರೇ ಹೂ ಇಟ್ಟುಕೊಂಡಿದ್ದಾರೆ" ಎಂದರು.
ಇದನ್ನೂ ಓದಿ: ಈ ಬಜೆಟ್ಗೆ ಮಹತ್ವ ಇಲ್ಲ, ಮುಂದಿನ ಸರ್ಕಾರ ನೀಡುವ ಬಜೆಟ್ ಕಾರ್ಯರೂಪಕ್ಕೆ: ಹೆಚ್ಡಿಕೆ