Watch - ಟ್ರಾಫಿಕ್ ಜಾಮ್ ಸಮಸ್ಯೆಗೆ ಬೇಸತ್ತು ಫುಟ್ ಓವರ್ ಬ್ರಿಡ್ಜ್ ಮೇಲೆ ಆಟೋ ಓಡಿಸಿದ ಭೂಪ - ದೆಹಲಿ ಟ್ರಾಫಿಕ್
🎬 Watch Now: Feature Video


Published : Sep 4, 2023, 10:39 AM IST
ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ವಾಹನಗಳ ಟ್ರಾಫಿಕ್ ಸಮಸ್ಯೆ ಸಾಮಾನ್ಯ ಎಂಬುವಂತಾಗಿ ಬಿಟ್ಟಿದೆ. ಮನೆ ಬಿಟ್ಟು ಗಾಡಿಗೆ ಹತ್ತಿ ಮುಂದೆ ಸಾಗಿದರೇ ಸಾಕು ಹೋದಲೆಲ್ಲಾ ಟ್ರಾಫಿಕ್ ಸಮಸ್ಯೆ ಎದುರಿಸಬೇಕಾಗುತ್ತದೆ. ಈ ಟ್ರಾಫಿಕ್ ಸಮಸ್ಯೆಯಿಂದ ಬೇಸತ್ತ ರಿಕ್ಷಾ ಚಾಲಕನೊಬ್ಬ ಹೊಸ ಮಾರ್ಗವನ್ನು ಕಂಡುಕೊಂಡು ಎಲ್ಲರನ್ನು ನಿಬ್ಬೆರಗಾಗಿಸಿರುವ ಘಟನೆ ನಡೆದಿದೆ. ಟ್ರಾಫಿಕ್ ತಪ್ಪಿಸಲು ಚಾಲಕ ತನ್ನ ಆಟೋವನ್ನು ಸೀದಾ ಫುಟ್ ಓವರ್ ಬ್ರಿಡ್ಜ್ ಮೇಲೆ ಚಲಾಯಿಸಿಕೊಂಡು ಹೋಗಿದ್ದಾನೆ.
ಈತ ಟ್ರಾಫಿಕ್ನಿಂದ ಬೇರೆ ಮಾರ್ಗ ಕಂಡುಕೊಂಡ ವಿಧಾನ ಕಾನೂನು ಬಾಹಿರ. ಆದರೆ ಈತ ತನ್ನ ಆಟೋವನ್ನು ಮೆಟ್ಟಿಲ ಮೇಲೆ ಹಾರಿಸಿಕೊಂಡು ಹೋಗಿರುವ ದೃಶ್ಯವಂತು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲಾಗುತ್ತಿದೆ. ಹಮ್ದರ್ದ್ ನಗರ ರೆಡ್ ಲೈಟ್ ಸಂಗಮ್ ವಿಹಾರ್ ಟ್ರಾಫಿಕ್ ಸರ್ಕಲ್‌ನಲ್ಲಿ ಸಂಚಾರ ದಟ್ಟಣೆ ಉಂಟಾಗಿದ್ದರಿಂದ ಜನರಿಗಾಗಿ ನಿರ್ಮಿಸಿರುವ ಫುಟ್ ಓವರ್ ಬ್ರಿಡ್ಜ್ ಮೇಲೆ ಆಟೋ ಓಡಿಸಿದ್ದಾನೆ. ವಿಡಿಯೋದಲ್ಲಿ ಚಾಲಕ ರಿಕ್ಷಾವನ್ನು ಓಡಿಸುತ್ತಿದ್ದು, ಹಿಂದಿನಿಂದ ಒಬ್ಬ ತಳ್ಳುತ್ತಿದ್ದು ಆಟೋ ಮುಂದೆ ಹೋದ ಹಾಗೆ ಓಡಿ ಹೋಗಿ ಹತ್ತಿಕೊಳ್ಳುತ್ತಾನೆ. ಮೆಹ್ರೌಲಿ ಬದರ್‌ಪುರ ರಸ್ತೆಯಲ್ಲಿ ಮೆಟ್ರೋ ಕಾಮಗಾರಿ ನಡೆಯುತ್ತಿದೆ. ಪರಿಣಾಮ ಪ್ರತಿದಿನ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗುತ್ತಿದೆ.
ಇದನ್ನೂ ಓದಿ: Watch: ಇಂಜಿನ್ ಇಲ್ಲದೆ ಹಳಿ ಮೇಲೆ ಚಲಿಸಿದ ರೈಲು ಬೋಗಿ-ವಿಡಿಯೋ