ಕಾಂಗ್ರೆಸ್ ಅಭ್ಯರ್ಥಿ ಹಲ್ಲೆ ಆರೋಪ: ಪೊಲೀಸ್ ಠಾಣೆ ಮುಂದೆ ಆಕ್ರೋಶ - ಯಶವಂತಪುರ ಪೊಲೀಸ್ ಠಾಣೆ
🎬 Watch Now: Feature Video

ಬೆಂಗಳೂರು: ಆರ್.ಆರ್.ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆರ್.ಕುಸುಮಾ ಹನುಮಂತರಾಯಪ್ಪ ಅವರ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಆರ್.ಆರ್.ನಗರದಲ್ಲಿ ನಿನ್ನೆ (ಶನಿವಾರ) ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ.
ಶಾಸಕ ಮುನಿರತ್ನ ಬೆಂಬಲಿಗ ಜಿ.ಕೆ.ವೆಂಕಟೇಶ್ ಅಲಿಯಾಸ್ ಎನ್‌ಟಿಆರ್ ಪ್ರಚೋದನೆಯಿಂದ ಕೈ ಕಾರ್ಯಕರ್ತರ ಮೇಲೆ ಬಿಜೆಪಿಯವರು ಹಲ್ಲೆ ನಡೆಸಿದ್ದಾರೆ. ಇದನ್ನು ಪ್ರಶ್ನಿಸಲು ಹೋದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಮತ್ತು ಅವರ ಬೆಂಬಲಿಗರ ಮೇಲೆ ಪೊಲೀಸರ ಮೂಲಕ ಲಾಠಿ ಚಾರ್ಜ್ ಮಾಡಿಸಲಾಗಿದೆ. ಖುದ್ದಾಗಿ ಮುನಿರತ್ನ ಅವರ ಬೆಂಬಲಿಗ ಎನ್‌ಟಿಆರ್ ಅವರು ಕುಸುಮಾ ಅವರ ಮೇಲೆ ಹಲ್ಲೆ ಮಾಡಿ, ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಕಾಂಗ್ರೆಸ್ ಆಪಾದಿಸಿದೆ. ಪೊಲೀಸರು ಕುಸುಮಾರನ್ನು ತಳ್ಳಿದ್ದಾರೆ ಎನ್ನಲಾಗಿದೆ. ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿರುವುದು ಸ್ಥಳೀಯರು ಮೊಬೈಲ್ನಲ್ಲಿ ಸೆರೆಯಾಗಿದೆ. ಗಲಾಟೆ ತೀವ್ರಗೊಳ್ಳುತ್ತಿದ್ದಂತೆ ಯಶವಂತಪುರ ಪೊಲೀಸ್ ಠಾಣೆಯ ಮುಂದೆ ಕೈ ಕಾರ್ಯಕರ್ತರು ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಬಜರಂಗದಳ ನಿಷೇಧ ಪಿಎಫ್ಐ, ಐಎಸ್‌ಐಗೆ ಆಹ್ವಾನ ನೀಡಿದಂತೆ: ಸಿಎಂ ಯೋಗಿ ಆದಿತ್ಯನಾಥ್