ಬಾರ್ ಮಾಲೀಕನ ಮೇಲೆ ತೀವ್ರ ಹಲ್ಲೆ, ಸಿಸಿಟಿವಿಯಲ್ಲಿ ಸೆರೆ - ದುಷ್ಕರ್ಮಿಗಳು ಪಾರ್ಟಿ ಬಳಿಕ ಮಾಲೀಕನ ಜತೆ ವಾಗ್ವಾದ
🎬 Watch Now: Feature Video
ಉಡುಪಿ:ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮದ ಚಿತ್ರಪಾಡಿ ನರ್ತಕಿ ಬಾರ್‌ನಲ್ಲಿ ದುಷ್ಕರ್ಮಿಗಳು ಗಲಾಟೆ ನಡೆಸಿ ಮಾಲೀಕನ ಮೇಲೆ ತೀವ್ರ ತರಹ ಹಲ್ಲೆ ನಡೆಸಿ,ಗಾಯಗೊಳಿಸಿರುವ ಘಟನೆ ಜರುಗಿದೆ. ಸೈನ್ಯದಲ್ಲಿ ದ್ದಾತನು ತನ್ನ ಸ್ನೇಹಿತರಿಗೆ ಪಾರ್ಟಿ ಆಯೋಜಿಸಿದ್ದನು. ದುಷ್ಕರ್ಮಿಗಳು ಪಾರ್ಟಿ ಬಳಿಕ ಮಾಲೀಕನ ಜತೆ ವಾಗ್ವಾದಕ್ಕಿಳಿದು ಗಲಾಟೆ ಮಾಡಿದ್ದರು.
ವಾಗ್ವಾದ ತಾರಕ್ಕೇರಿ ದುಷ್ಕರ್ಮಿಗಳು ಬಾರ್ ಮಾಲೀಕ ರಿತೇಶ್‌ನನ್ನು ನೆರಕುರುಳಿಸಿ ಚಪ್ಪಲಿಯಿಂದ ತುಳಿದು ಬಿಯರ್ ಬಾಟಲಿಯಿಂದ ಹೊಡೆದು ಹಲ್ಲೆ ನಡೆಸಿದ್ದಾರೆ.ಈ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಹಲ್ಲೆಗೈದ ಆರೋಪಿಗಳಾದ ರೋಹಿತ್, ರಂಜಿತ್, ಸಚಿನ್ ಶಶಾಂಕ್, ವಿಘ್ನೇಶ್ನನ್ನು ಬಂಧಿಸಿದ್ದು. ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂಓದಿ:ಬಾಲ್ಯ ವಿವಾಹದ ವಿರುದ್ಧ ಅಸ್ಸಾಂನಲ್ಲಿ ಶಿಸ್ತು ಕ್ರಮ: ಮೌಲಾನಾ, ಪೂಜಾರಿಗಳು ಸೇರಿ 2044 ಜನರ ಬಂಧನ