ಶಿವರಾತ್ರಿಯ ಸಂಭ್ರಮ: ಮರಳು ಶಿಲ್ಪಗಳ ಮೂಲಕ ಭಕ್ತಿ ಸಮರ್ಪಿಸಿದ ಕಲಾವಿದರು - ಶಿವ ಮತ್ತು ಶಿವಲಿಂಗಗಳ ಮರಳು ಶಿಲ್ಪ
🎬 Watch Now: Feature Video
ಒಡಿಶಾ: ದೇಶದೆಲ್ಲಡೆ ಇಂದು ಮಹಾಶಿವರಾತ್ರಿ ಆಚರಿಸಲಾಗುತ್ತಿದೆ. ರಾತ್ರಿಯಿಡೀ ಜಾಗರಣೆ ಕುಳಿತು ಭಜನೆ, ಹಾಡುಗಳನ್ನು ಹಾಡಿ ಶಿವನನ್ನು ಕೊಂಡಾಡಲು ಭಕ್ತರು ತಯಾರಾಗುತ್ತಿದ್ದಾರೆ. ಆದರೆ, ಒಡಿಶಾದ ಇಬ್ಬರು ಕಲಾವಿದರು ತಮ್ಮ ಭಕ್ತಿಯನ್ನು ಕಲೆಯ ಮೂಲಕ ಶಿವನಿಗೆ ಅರ್ಪಿಸಿದ್ದಾರೆ. ಶಿವರಾತ್ರಿ ಹಿನ್ನೆಲೆ ಮರಳಿನಿಂದ ಶಿವನ ಆಕೃತಿಯನ್ನು ರಚಿಸಿ ಭಕ್ತಿಯ ಪರಾಕಾಷ್ಠೆ ಮೆರೆದಿದ್ದಾರೆ.
ಒಡಿಶಾ ಮರಳು ಕಲಾವಿದ ಸುದಮ್ ಪ್ರಧಾನ್ ಅವರು ಪುರಿ ಬಲಿಗುವಾಲಿ ಶಿವ ದೇವಾಲಯದಲ್ಲಿ ಭಗವಾನ್ ದೇವ್ ಮಹಾದೇವನ ಬೃಹತ್ ಮರಳಿನ ಕೃತಿಯನ್ನು ರಚಿಸಿದ್ದಾರೆ. 6 ಅಡಿ ಎತ್ತರ ಮತ್ತು 12 ಅಡಿ ಅಗಲವಿರುವ ಈ ಮರಳಿನ ಶಿಲ್ಪವನ್ನು ರಚಿಸಲು ಸುಮಾರು 10 ಟನ್ ಮರಳು ಬಳಸಿರುವ ಕಲಾವಿದ ಸುದಮ್ ಪ್ರಧಾನ್ ಅವರು ಸುಮಾರು 6 ಗಂಟೆಗಳಲ್ಲಿ ಈ ಕಲಾಕೃತಿಯನ್ನು ಮಾಡಿ ಮುಗಿಸಿದ್ದಾರೆ. ಪ್ರತಿ ವರ್ಷ ಸುದಮ್ ಪ್ರಧಾನ್ ಅವರು ಶಿವರಾತ್ರಿಗೆ ವಿಭಿನ್ನವಾಗಿರುವ ಶಿವನ ಆಕೃತಿಗಳನ್ನು ಮರಳಿನಲ್ಲಿ ರಚಿಸಿ, ಭಕ್ತರಿಗೆ ಶಿವರಾತ್ರಿಯ ಶುಭಾಶಯಗಳನ್ನು ಕೋರುತ್ತಾರೆ.
ಒಡಿಶಾದ ಪುರಿಯ ಇನ್ನೊಬ್ಬ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಕಡಲತೀರದಲ್ಲಿ ಶಿವ ಮತ್ತು ಶಿವಲಿಂಗಗಳ ಮರಳು ಶಿಲ್ಪಗಳನ್ನು ರಚಿಸಿ ವಿಶ್ವದ ಶಾಂತಿಗಾಗಿ ಪ್ರಾರ್ಥಿಸಿದ್ದಾರೆ. ಪುರಿಯ ನೀಲಾದ್ರಿ ಬೀಚ್ಗೆ ಭೇಟಿ ನೀಡುವ ಪ್ರವಾಸಿಗರೆಲ್ಲರೂ ಸುದರ್ಶನ್ ಪಟ್ನಾಯಕ್ ಅವರ ಮರಳು ಶಿಲ್ದ ಅಂದಕ್ಕೂ ಮನಸೋತು ಫೋಟೋಗಳನ್ನು, ಸೆಲ್ಫಿಗಳನ್ನು ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ. ಪುರಿಯ ಪ್ರಸಿದ್ಧ ಶಿವಪೀಠವಾದ ಲೋಕನಾಥ ದೇವಾಲಯದಲ್ಲಿ ಶಿವನ ಪೂಜೆ, ದರ್ಶನ ಮತ್ತು ದೀಪ ಬೆಳಗಿಸಲು ಲಕ್ಷಾಂತರ ಭಕ್ತರು ಸೇರುವ ನಿರೀಕ್ಷೆಯಿದೆ. ಕೋವಿಡ್ನಿಂದಾಗಿ ಕಳೆದ ಎರಡು ವರ್ಷಗಳ ಭಕ್ತರಿಲ್ಲದೆ ನಡೆದ ಶಿವನ ಜಾಗರ ಜಾತ್ರೆ, ನಿರ್ಬಂಧಗಳ ತೆರವಿನಿಂದ ಈ ಬಾರಿ ಅದ್ಧೂರಿಯಾಗಿ ನಡೆಯುವ ನಿರೀಕ್ಷೆಯಿದೆ.
ಇದನ್ನೂ ಓದಿ: ವಿಜಯಪುರ: ಮಹಾ ಶಿವರಾತ್ರಿಗೆ ಸಜ್ಜಾದ ಶಿವಗಿರಿ