ಶಿವಮೊಗ್ಗವನ್ನು ಬರ ಜಿಲ್ಲೆಯನ್ನಾಗಿ ಘೋಷಿಸಲು ಕೃಷಿ ಸಚಿವರಿಗೆ ಮನವಿ: ಮಧು ಬಂಗಾರಪ್ಪ
🎬 Watch Now: Feature Video
Published : Sep 13, 2023, 9:13 AM IST
ಶಿವಮೊಗ್ಗ : ಈ ಬಾರಿ ಮಳೆ ಆಗಬೇಕಿತ್ತು, ನಿರೀಕ್ಷೆ ಕೂಡ ಇತ್ತು. ಆದರೂ, ವರುಣ ಕೈ ಕೊಟ್ಟಿದ್ದಾನೆ. ಗಣೇಶ ಹಬ್ಬದ ನಂತರ ಮಳೆ ಆಗುತ್ತಾ ಎಂದು ಕಾದು ನೋಡೋಣ. ಜಿಲ್ಲೆಯನ್ನು ಬರದ ಪಟ್ಟಿಗೆ ಸೇರಿಸುವಂತೆ ನಾನು ಕೃಷಿ ಸಚಿವರಿಗೆ ಮನವಿ ಮಾಡಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಸಚಿವ ಡಿ.ಸುಧಾಕರ್ ವಿರುದ್ಧ ಎಫ್ಐಆರ್ ದಾಖಲು ವಿಚಾರಕ್ಕೆ ಶಿವಮೊಗ್ಗದಲ್ಲಿ ಪ್ರತಿಕ್ರಿಯಿಸಿದ ಅವರು, ನಾನು ನಾಲ್ಕು ದಿನ ವಿದೇಶದಲ್ಲಿದ್ದೆ, ಈ ಬಗ್ಗೆ ಮಾಹಿತಿ ಇಲ್ಲ ಎಂದರು. ಬಳಿಕ, ಕಾವೇರಿ ನೀರು ಹರಿಸುವ ವಿಚಾರದ ಕುರಿತು ಮಾತನಾಡಿ, ಇದಕ್ಕೆ ಸಂಬಂಧಿಸಿದಂತೆ ಐಸಿಸಿ ಸಮಿತಿಯಲ್ಲಿ ತೀರ್ಮಾನ ಮಾಡುತ್ತಾರೆ. ಅಲ್ಲಿ ಕೆಲವು ಕಾನೂನುಗಳು ಇರುತ್ತವೆ. ಆ ಬಗ್ಗೆ ವಿಶ್ಲೇಷಣೆ ಮಾಡುವುದಿಲ್ಲ ಎಂದು ಹೇಳಿದರು.
ನಾವು ರೈತರ ಜೊತೆಗಿದ್ದೇವೆ: ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದು, ನಾವು ನಿಮ್ಮ ಜೊತೆಗಿದ್ದೇವೆ. ಆತ್ಮಹತ್ಯೆ ಪರಿಹಾರದ ವಿಚಾರದಲ್ಲಿ ಯಾವುದೇ ತಾರತಮ್ಯ ಮಾಡಲು ಹೋಗುವುದಿಲ್ಲ. ಸಾವಿಗೆ ಶರಣಾದ ರೈತರಿಗೆ ಪರಿಹಾರ ಕೊಡಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ : ಸಚಿವ ಮಧು ಬಂಗಾರಪ್ಪ ವಿರುದ್ಧ ಕಾರ್ಯಕರ್ತರ ಅಸಮಾಧಾನ : ಕೈ ಮುಖಂಡರನ್ನು ಸಮಾಧಾನ ಮಾಡಿದ ಜಿಲ್ಲಾಧ್ಯಕ್ಷರು