ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನಲ್ಲಿ ಧೂಮಪಾನ.. ದಟ್ಟವಾದ ಹೊಗೆಗೆ ಬೆಚ್ಚಿಬಿದ್ದ ಪ್ರಯಾಣಿಕರು - ತಿರುಪತಿಯಿಂದ ಸಿಕಂದರಾಬಾದ್ಗೆ ಹೊರಟಿದ್ದ ವಂದೇ ಭಾರತ್
🎬 Watch Now: Feature Video
ನೆಲ್ಲೂರು, ಆಂಧ್ರಪ್ರದೇಶ: ಜಿಲ್ಲೆಯ ಮನುಬೋಳು ರೈಲು ನಿಲ್ದಾಣದಲ್ಲಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಹೊಗೆಯಿಂದಾಗಿ ಸುಮಾರು ಒಂದು ಗಂಟೆ ಕಾಲ ಸ್ಥಗಿತಗೊಂಡಿತ್ತು. ತಿರುಪತಿಯಿಂದ ಸಿಕಂದರಾಬಾದ್ಗೆ ಹೊರಟಿದ್ದ ವಂದೇ ಭಾರತ್ ರೈಲಿನಲ್ಲಿ ಹೊಗೆ ತುಂಬಿಕೊಂಡಿತ್ತು. ಕೂಡಲೇ ಸಿಬ್ಬಂದಿ ಲೋಕೋ ಪೈಲಟ್ಗೆ ಮಾಹಿತಿ ನೀಡಿದ್ದಾರೆ. ನಿಲ್ದಾಣದಲ್ಲಿ ರೈಲು ನಿಂತಿದ್ದರಿಂದ ಗಾಬರಿಗೊಂಡ ಪ್ರಯಾಣಿಕರು ಕೆಳಗಿಳಿದಿದ್ದಾರೆ. ರೈಲಿನ ಮೂರನೇ ಬೋಗಿಯ ವಾಶ್ರೂಂನಲ್ಲಿ ಹೊಗೆ ಬರುತ್ತಿರುವುದನ್ನು ಸಿಬ್ಬಂದಿ ಪರಿಶೀಲಿಸಿದರು. ಈ ವೇಳೆ ಉಪಕರಣಗಳಿಗೆ ಸುಟ್ಟ ಸಿಗರೇಟಿನ ತುಂಡು ಅಂಟಿಕೊಂಡಿದ್ದರಿಂದ ಹೊಗೆ ಹಬ್ಬಿರುವುದು ದೃಢಪಟ್ಟಿದೆ. ಘಟನೆಗೆ ಕಾರಣರಾದ ಪ್ರಯಾಣಿಕನನ್ನು ಪೊಲೀಸರು ಬಂಧಿಸಿದ್ದಾರೆ.
ಈ ಬಗ್ಗೆ ದಕ್ಷಿಣ ಮಧ್ಯ ರೈಲ್ವೆ (ಎಸ್ಸಿಆರ್) ವಲಯದ ವಿಜಯವಾಡ ವಿಭಾಗದ ಅಧಿಕಾರಿ ಮಾತನಾಡಿ, ತಿರುಪತಿಯಿಂದ ಅನಧಿಕೃತ ಪ್ರಯಾಣಿಕರೊಬ್ಬರು ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಅವರು ಸ್ವತಃ ಸಿ -13 ಕೋಚ್ನ ಶೌಚಾಲಯದೊಳಗೆ ಹೋಗಿ ಧೂಮಪಾನ ಮಾಡಿದರು. ಈ ವೇಳೆ ಶೌಚಾಲಯದೊಳಗಿನ ಬೆಂಕಿ ನಂದಿಸಲು ಏರೋಸಾಲ್ ಆನ್ ಆಗಿದೆ. ಏರೋಸಾಲ್ ಯಂತ್ರದಿಂದ ಪೌಡರ್ ಬರಲಾರಂಭಿಸಿದ್ದರಿಂದ ರೈಲಿನಲ್ಲಿ ಹೊಗೆಯ ವಾತಾವರಣ ನಿರ್ಮಾಣಗೊಂಡಿದೆ. ಹೊಗೆಯಿಂದ ಇತರ ಪ್ರಯಾಣಿಕರು ತುಂಬಾ ಭಯಭೀತರಾಗಿದ್ದರು ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.
ಓದಿ: ಬೆಂಗಳೂರು - ಧಾರವಾಡ ವಂದೇ ಭಾರತ್ ರೈಲು ಸೇವೆಗೆ ಜನರಿಂದ ಉತ್ತಮ ಸ್ಪಂದನೆ..