ಕುಂದಾಪುರ ಮೂಲದ ಥಾಯ್ ಫೈಟರ್ ಅನೀಶ್ ಶೆಟ್ಟಿಗೆ ಜಯ - Etv bharat Kannada
🎬 Watch Now: Feature Video
ಉಡುಪಿ: ಕುಂದಾಪುರ ಮೂಲದ ಮುವಾಯ್ ಥಾಯ್ ಫೈಟರ್ಗೆ ಮತ್ತೊಂದು ಅಂತಾರಾಷ್ಟ್ರೀಯ ಜಯ ಸಿಕ್ಕಿದೆ. ಕುಂದಾಪುರ ಮೂಲದ ಅನೀಶ್ ಶೆಟ್ಟಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಮುವಾಯ್ ಥಾಯ್ ಫೈಟರ್ ಆಗಿದ್ದು, ಥಾಯ್ಲೆಂಡ್ನ ಪುಕೆಟನ್ ರವಾಯ್ ಸ್ಟೇಡಿಯಂನಲ್ಲಿ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಮುವಾಯ್ ಥಾಯ್ ಕಿಕ್ ಬಾಕ್ಸಿಂಗ್ ಪಂದ್ಯದಲ್ಲಿ ಜಯಭೇರಿ ಬಾರಿಸಿದ್ದಾರೆ.
68 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಅನೀಶ್ ಶೆಟ್ಟಿ ಮುವಾಯ್ ಥಾಯ್ ಫೈಟ್ನಲ್ಲಿ ಸಾಕಷ್ಟು ಅನುಭವವಿರುವ ಎದುರಾಳಿಯನ್ನು ಮಣಿಸಿ ಜಯಗಳಿಸಿದ್ದಾರೆ. ಪ್ರಥಮ ಸುತ್ತಿನಲ್ಲೆ ಫ್ಲೈಯಿಂಗ್ ಕಿಕ್ ಮೂಲಕ ಎದುರಾಳಿಯನ್ನು ನಾಕೌಟ್ ಮಾಡುವ ಮೂಲಕ ಅನೀಶ್ ಭರ್ಜರಿ ಜಯಗಳಿಸಿದ್ದಾರೆ.
ಇದನ್ನೂ ಓದಿ: ನ್ಯೂಜಿಲ್ಯಾಂಡ್ ವಿರುದ್ಧದ ಸೋಲಿಗೆ ಮಾರಕವಾದ ಕೊನೆಯ ಓವರ್: ಸುಂದರ್ ಹೊಗಳಿದ ಪಾಂಡ್ಯ
Last Updated : Feb 3, 2023, 8:39 PM IST