ಆನೇಕಲ್: ರಸ್ತೆಯಲ್ಲಿ ಧಗ ಧಗ ಹೊತ್ತಿ ಉರಿದ ಕಾರು - bengaluru hosuru road
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-17240967-thumbnail-3x2-sa.jpg)
ಆನೇಕಲ್: ಬೇಸಿಗೆ ಆರಂಭಕ್ಕೂ ಮುನ್ನ ಕಾರೊಂದು ಹೊತ್ತಿ ಉರಿದ ಘಟನೆ ಬೆಂಗಳೂರು-ಹೊಸೂರು ಹೆದ್ದಾರಿ ಮೇಲ್ಸೇತುವೆ ಮೇಲೆ ನಡೆದಿದೆ. ಹೊಸೂರಿಗೆ ತೆರಳುತ್ತಿದ್ದ ಕಾರಿನಲ್ಲಿ ಆಕಸ್ಮಿಕವಾಗಿ ಇಂಜಿನ್ ಒಳಗೆ ಬೆಂಕಿ ಕಾಣಿಸಿಕೊಂಡು ಕಾರು ಹೊತ್ತಿ ಉರಿದಿದೆ. ಕಾರಿನಲ್ಲಿ ಹೊಗೆ ಕಾಣಿಸುತ್ತಿದ್ದಂತೆ ಅದರಲ್ಲಿದ್ದ ಪ್ರಯಾಣಿಕರು ಆಚೆಗೆ ಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗು ಅತ್ತಿಬೆಲೆ ಪೊಲೀಸರು ಆಗಮಿಸಿ ಕಾರಿನ ಬೆಂಕಿ ಆರಿಸಲು ಪ್ರಯತ್ನಿಸಿದರು. ಆದರೆ ಅಷ್ಟರಲ್ಲಾಗಲೇ ಕಾರು ಸಂಪೂರ್ಣ ಸುಟ್ಟು ಕರಕಲಾಗಿದೆ.
Last Updated : Feb 3, 2023, 8:36 PM IST