ರಾಜ್ಯದಲ್ಲಿಯೇ 600ಕ್ಕೆ 600 ಅಂಕ ಪಡೆದು ಪ್ರಥಮ ಸ್ಥಾನ ಪಡೆದ ಕೊಡಗಿನ ಕುವರಿ ಅನನ್ಯ - ದ್ವಿತೀಯ ಪಿಯು ಫಲಿತಾಂಶ
🎬 Watch Now: Feature Video
ಕೊಡಗು: ಕೊಡಗು ಜಿಲ್ಲೆ ಡಬ್ಬಲ್ ಧಮಾಕದ ಸಂಭ್ರಮಾಚರಣೆಯಲ್ಲಿದೆ. ಒಂದೆಡೆ ಕೊಡಗು ಜಿಲ್ಲೆಗೆ ರಾಜ್ಯದಲ್ಲಿಯೇ ದ್ವಿತೀಯ ಪಿಯು ಫಲಿತಾಂಶದಲ್ಲಿ ಮೂರನೇ ಸ್ಥಾನ ದೊರಕಿದೆ. ಇನ್ನೊಂದೆಡೆ ಇದೇ ಜಿಲ್ಲೆಯ ಕುವರಿ ಅನನ್ಯ ಇವರೊಬ್ಬರೇ 600ಕ್ಕೆ 600 ಅಂಕ ಪಡೆದು ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಈ ಸಾಧನೆ ಮಾಡಿದ್ದಾರೆ.
ಜಿಲ್ಲೆಯ ಕುಶಾಲನಗರ ತಾಲೂಕಿನ ಗುಮ್ಮನ ಕೊಲ್ಲಿ ನಿವಾಸಿಯಾಗಿರುವ ಅನನ್ಯ ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದು, 600 ಕ್ಕೆ 600 ಅಂಕ ಪಡೆದು ರಾಜ್ಯಕ್ಕೆ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಗುಮ್ಮನ ಕೊಲ್ಲಿ ನಿವಾಸಿಗಳಾದ ನಿವೃತ್ತಿ ಸೈನಿಕ ಅಶೋಕ್ ಕೆ ಇ ಮತ್ತು ಶಾಲಾ ಶಿಕ್ಷಕಿ ನಳಿನಿ ಪುತ್ರಿಯಾದ ಅನನ್ಯರ ಫಲಿತಾಂಶ ಪ್ರಕಟವಾಗುತ್ತಿದಂತೆ ಮಗಳು ರಾಜ್ಯಕ್ಕೆ ಮೊದಲ ಸ್ಥಾನ ಪಡೆದ ಮಗಳ ಸಾಧನೆಯನ್ನು ಕಂಡು ಪೋಷಕರು ಹರ್ಷ ವ್ಯಕ್ತಪಡಿಸಿದ್ದಾರೆ.
ಮನೆಯರು ಮತ್ತು ಸುತ್ತ ಮುತ್ತಲಿನ ಜನರು ಸೇರಿ ಸಿಹಿ ಹಂಚಿ ಸಂಭ್ರಮಿಸಿದ್ಧಾರೆ. ಮಗಳ ಸಾಧನೆ ನಮಗೆ ಖುಷಿ ತಂದಿದೆ ಮಗಳು ಕ್ರೀಡೆಯಲ್ಲಿ ಓದಿನಲ್ಲಿ ಮುಂದೆ ಇದ್ದಳು. ಅಲ್ಲದೆ ಆಕೆ ಹೆಚ್ಚು ಅಂಕ ಪಡೆಯುತ್ತಾಳೆ ಅಂತ ಗೊತ್ತಿತ್ತು. ಆದರೆ, ರಾಜ್ಯ ಮೊದಲ ಸ್ಥಾನ ಪಡೆದಿರುವುದು ಅತ್ಯಂತ ಖುಷಿಯಾಗಿದೆ ಎಂದು ಸಂತೋಷ ವ್ಯಕ್ತ ಪಡಿಸಿದ್ದಾರೆ.
ಇದನ್ನೂ ಓದಿ: ಕಲಾ ವಿಭಾಗದಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಕುಂದಾನಗರಿಯ ಪ್ರಿಯಾಂಕಾ ಕುಲಕರ್ಣಿ