ಸಮುದ್ರದಲ್ಲಿ ಸಿಕ್ಕ ಅಪರೂಪದ ಗೋಲ್ಡನ್ ಫಿಶ್.. ₹3 ಲಕ್ಷದ 90 ಸಾವಿರಕ್ಕೆ ಮಾರಾಟ! - ETV Bharat Karnataka
🎬 Watch Now: Feature Video
Published : Nov 28, 2023, 5:22 PM IST
ಅನಕಾಪಲ್ಲಿ (ಆಂಧ್ರಪ್ರದೇಶ) : ಇಲ್ಲಿಯ ಅಚ್ಯುತಪುರಂನ ಮೀನುಗಾರನೊಬ್ಬನಿಗೆ ಸಮುದ್ರದಲ್ಲಿ ಅಪರೂಪದ ಗೋಲ್ಡನ್ ಫಿಶ್ ಸಿಕ್ಕಿದ್ದು, ಬರೋಬ್ಬರಿ 3.90 ಲಕ್ಷ ರೂ.ಗಳಿಗೆ ಮಾರಾಟವಾಗಿದೆ. ಮೀನುಗಾರನ ನಿರೀಕ್ಷಿತ ಬೆಲೆಗಿಂತ ಮೀನು ಮಾರಾಟವಾಗಿರುವುದಕ್ಕೆ ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ. ಈ ಅಪರೂಪದ ಮೀನನ್ನು ಮಾರಾಟ ಮಾಡುವ ವೇಳೆ ಮಾರುಕಟ್ಟೆಯಲ್ಲಿ ಖರೀದಿಸಲು ಜನರು ಸಾಲುಗಟ್ಟಿ ನಿಂತಿದ್ದರು.
ಈ ಸಂದರ್ಭದಲ್ಲಿ ಪುಡಿಮಡಕದ ಮೇರುಗು ಕೊಂಡಯ್ಯ ಎಂಬ ಉದ್ಯಮಿ 3.90 ಲಕ್ಷ ರೂ. ಗಳಿಗೆ ಗೋಲ್ಡನ್ ಫಿಶ್ ಖರೀದಿ ಮಾಡಿದ್ದಾರೆ. ಈ ಮೀನಿನ ಅಡುಗೆ ಅತ್ಯಂತ ರುಚಿಕರವಾಗಿದ್ದು, ಒಮ್ಮೆ ನೀವು ತಿಂದರೆ ಮತ್ತೆ ಮತ್ತೆ ತಿನ್ನಲು ಬಯಸುತ್ತೀರಾ ಎನ್ನುತ್ತಾರೆ ಅಲ್ಲಿನ ಸ್ಥಳೀಯರು.
ಮೀನುಗಾರ ಮೇರುಗು ನೂಕಯ್ಯ ಮಾತನಾಡಿ, ಈ ಗೋಲ್ಡನ್ ಫಿಶ್ 27 ಕೆಜಿ ತೂಕವಿದ್ದು, ಶಸ್ತ್ರಚಿಕಿತ್ಸೆಯ ನಂತರ ಬಳಸುವ ಹೊಲಿಗೆ ದಾರವನ್ನು ಈ ಮೀನಿನ ಪಿತ್ತಕೋಶದಿಂದ ತಯಾರಿಸಲಾಗುತ್ತದೆ. ಅಲ್ಲದೇ, ಇದರ ದೇಹದ ಭಾಗಗಳನ್ನು ಔಷಧಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಹಾಗಾಗಿ ಸಮುದ್ರದ ಚಿನ್ನ ಎಂದು ಕರೆಯಲ್ಪಡುವ ಈ ಮೀನಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಕೃಷಿ ಮೇಳ 2023: ಹೊಸ ಬಗೆಯ "ಆಲ್ ಮೇಲ್ ಟಿಲಾಪಿಯಾ" ಮೀನುಗಳನ್ನ ಮುನ್ನೆಲೆಗೆ ತರುತ್ತಿರುವ ಕೃಷಿ ವಿವಿ