ಬಸ್ ನಿಲ್ದಾಣದಲ್ಲಿನ ಎಟಿಎಂಗೆ ಬೆಂಕಿ... ಕ್ಷಣಾರ್ಧದಲ್ಲಿ ಸುಟ್ಟು ಕರಕಲು - VIDEO - ಕೆ ಆರ್ ನಗರದ ಬಸ್ ನಿಲ್ದಾಣ
🎬 Watch Now: Feature Video
ಮೈಸೂರು: ಅಗ್ನಿ ಅವಘಡಕ್ಕೆ ಎಟಿಎಮ್ ಹೊತ್ತಿ ಉರಿದಿರುವ ಘಟನೆ ಕೆ.ಆರ್.ನಗರದ ಬಸ್ ನಿಲ್ದಾಣದಲ್ಲಿ ನಡೆದಿದೆ. ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳ, ಬೆಂಕಿ ನಂದಿಸುವಷ್ಟರಲ್ಲಿ ಎಟಿಎಂ ಸಂಪೂರ್ಣ ಸುಟ್ಟು ಕರಕಲಾಗಿತ್ತು. ಮೈಸೂರು ಜಿಲ್ಲೆಯ ಕೆ ಆರ್. ನಗರ ಪಟ್ಟಣದ ಸರ್ಕಾರಿ ಬಸ್ ನಿಲ್ದಾಣದಲ್ಲಿ ಕರ್ನಾಟಕ ಬ್ಯಾಂಕ್ಗೆ ಸೇರಿದ ಎಟಿಎಂನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣ ಮಾತ್ರದಲ್ಲಿ ಬೆಂಕಿಗೆ ಎಟಿಎಂ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ.
ಮಾಹಿತಿ ತಿಳಿದ ತಕ್ಷಣವೇ ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ಬೆಂಕಿ ನಂದಿಸಲು ಹರಸಾಹಸಪಟ್ಟರು. ಅಷ್ಟೊತ್ತಿಗಾಗಲೇ ಎಟಿಎಂ ಸಂಪೂರ್ಣ ಸುಟ್ಟು ಹೋಗಿದ್ದು, ಎಟಿಎಂನಲ್ಲಿ ಇದ್ದ ಹಣ ಹಾಗೂ ಇತರ ವಸ್ತುಗಳು ಸಹ ಸುಟ್ಟು ಕರಕಲಾಗಿವೆ. ಎಟಿಎಂನಲ್ಲಿ ಎಷ್ಟು ಹಣ ಇತ್ತು ಎಂಬ ಮಾಹಿತಿ ಸಿಕ್ಕಿಲ್ಲ. ಈ ಬೆಂಕಿ ಅವಘಡಕ್ಕೆ ಕಾರಣ ತಿಳಿದು ಬಂದಿಲ್ಲ. ಈ ಸಂಬಂಧ ಕೆ ಆರ್. ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ಬಾಯಾರಿಕೆ.. ದೇವಸ್ಥಾನದಲ್ಲಿ ಕೈ ಪಂಪ್ ಒತ್ತಿ ನೀರು ಕುಡಿದ ಕಾಡಾನೆ: ವೈರಲ್ ವಿಡಿಯೋ