ವಿಜಯನಗರ: ಅಮೆರಿಕ ಪುರಾತತ್ವಶಾಸ್ತ್ರಜ್ಞನ ಅಸ್ತಿ ಹಂಪಿಯ ತುಂಗಭದ್ರಾ ನದಿಯಲ್ಲಿ ವಿಸರ್ಜನೆ
🎬 Watch Now: Feature Video
ವಿಜಯನಗರ: ಹೆಸರಾಂತ ಪುರಾತತ್ವಶಾಸ್ತ್ರಜ್ಞ ಜಾನ್ ಮೆರ್ವಿನ್ ಫ್ರಿಟ್ಸ್ (83) ಅವರು ಇತ್ತೀಚಿಗೆ ಕ್ಯಾನ್ಸರ್‌ನಿಂದ ನಿಧನ ಹೊಂದಿದ್ದರು. ಅವರ ಕೊನೆ ಆಸೆಯಂತೆ ಕುಟುಂಬಸ್ಥರು ಫ್ರಿಟ್ಸ್ ಅಸ್ತಿಯನ್ನು ಹಂಪಿಯ ತುಂಗಭದ್ರಾ ನದಿಯಲ್ಲಿ ವಿಸರ್ಜನೆ ಮಾಡಿ ಧಾರ್ಮಿಕ ವಿಧಿ ವಿಧಾನ ನೆರವೇರಿಸಿದ್ದಾರೆ.
ಅಮೆರಿಕದಲ್ಲಿ ಹುಟ್ಟಿದ್ದ ಮೆರ್ವಿನ್ ಫ್ರಿಟ್ಸ್ ಅವರ ಕಾರ್ಯಕ್ಷೇತ್ರ ಲಂಡನ್ ಆಗಿತ್ತು. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಫ್ರಿಟ್ಸ್ ಕಳೆದ ಜನವರಿ 23 ರಂದು ಲಂಡನ್‌ನಲ್ಲಿ ಮೃತಪಟ್ಟಿದ್ದರು. ಅವರ ಕೊನೆ ಆಸೆಯಂತೆ ಹಿಂದೂ ಧರ್ಮದ ಧಾರ್ಮಿಕ ವಿಧಿ ವಿಧಾನಗಳ ಪ್ರಕಾರ ಮಗಳು ಆಲಿಸ್, ಮೊಮ್ಮಗ ವಿಲಿಯಂ ಅವರು ಅಮೆರಿಕದ ಸಿಯಾಟೆಲ್‌ನಿಂದ ಹಂಪಿಯ ತುಂಗಭದ್ರಾ ನದಿಯಲ್ಲಿ ಅವರ ಅಸ್ತಿಯನ್ನು ವಿಸರ್ಜಿಸಿದ್ದಾರೆ.
ಹಂಪಿ ಜೊತೆಗೆ ವಿಶೇಷ ಒಡನಾಟ: ಪುರಾತತ್ವಶಾಸ್ತ್ರಜ್ಞ ಫ್ರಿಟ್ಸ್ ಅವರು 1981ರಿಂದ ಸತತವಾಗಿ ಹಂಪಿಗೆ ಭೇಟಿ ನೀಡುತ್ತಿದ್ದರು. ಹಂಪಿಯ ಇತಿಹಾಸದ ಬಗ್ಗೆ ಆಳವಾದ ಸಂಶೋಧನೆ ನಡೆಸಿ, ಅನೇಕ ಪುಸ್ತಕಗಳನ್ನು ಬರೆದಿದ್ದರು. ಇದರಲ್ಲಿ ಮೊನೊಗ್ರಾಫ್ ಸರಣಿ ಪ್ರಮುಖವಾದದ್ದು. ಹಂಪಿ ಜೊತೆಗೂ ವಿಶೇಷ ಒಡನಾಟ ಹೊಂದಿದ್ದ ಅವರು ನಿಧನಾನಂತರ ತಮ್ಮ ಅಸ್ಥಿಯನ್ನು ಹಂಪಿಯಲ್ಲೇ ವಿಸರ್ಜಿಸಬೇಕೆಂದು ಹೇಳಿದ್ದರು. ಅದರಂತೆ ಮಗಳು ಆ್ಯಲಿಸ್ ಮೊಮ್ಮಗ ವಿಲಿಯಂ ಅವರ ಕೊನೆ ಆಸೆಯನ್ನು ನೆರವೇರಿಸಿದ್ದಾರೆ.
ಇದನ್ನೂ ಓದಿ: ಗಡಿ ಜಿಲ್ಲೆಯಲ್ಲಿ ಹಾರಿ ಬಂತೊಂದು ವಿಚಿತ್ರ ಎಲೆಕ್ಟ್ರಿಕಲ್ ಬಲೂನು!