ಎಐಎಡಿಎಂಕೆ ಸುವರ್ಣ ಮಹೋತ್ಸವ; 51 ಅಡಿ ಎತ್ತರದ ಕಂಬದಲ್ಲಿ ಧ್ವಜಾರೋಹಣ-ವಿಡಿಯೋ - ಎಐಎಡಿಎಂಕೆ 50ನೇ ಸುವರ್ಣ ಮಹೋತ್ಸವ ಸಂಭ್ರಮ
🎬 Watch Now: Feature Video
ತಮಿಳುನಾಡು: ಮಾಜಿ ಸಿಎಂ ಹಾಗೂ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ.ಪಳನಿಸ್ವಾಮಿ ಅವರು ಎಐಎಡಿಎಂಕೆಯ 50ನೇ ವರ್ಷದ ಸುವರ್ಣ ಮಹೋತ್ಸವ ಅಂಗವಾಗಿ ಇಂದು ಮಧುರೈನ ವಳಯಂಕುಲಂನಲ್ಲಿ ಪಕ್ಷದ ಧ್ವಜಾರೋಹಣ ಕಾರ್ಯ ನೆರವೇರಿಸಿದರು. ಮಧುರೈ ರಿಂಗ್ ರೋಡ್ ಪ್ರದೇಶದಲ್ಲಿ ಎಐಎಡಿಎಂಕೆ ರ‍್ಯಾಲಿ ನಡೆಯುತ್ತಿದ್ದು, ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಕಾರ್ಯಕರ್ತರು ಸಮಾವೇಶದಲ್ಲಿ ಜಮಾಯಿಸಿದ್ದಾರೆ.
ಧ್ವಜಾರೋಹಣಕ್ಕೂ ಮುನ್ನ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಪಳನಿಸ್ವಾಮಿ ಅವರಿಗೆ ಪುಷ್ಪವೃಷ್ಟಿ ಮಾಡಿ ಸಾರ್ವಜನಿಕರು ಅದ್ಧೂರಿಯಾಗಿ ಸ್ವಾಗತಿಸಿದರು. ಆ ನಂತರ 51 ಅಡಿ ಎತ್ತರದ ಕಂಬದಲ್ಲಿ ಎಐಎಡಿಎಂಕೆ ಧ್ವಜಾರೋಹಣ ಮಾಡುವ ಮೂಲಕ ಮಾಜಿ ಸಿಎಂ ಸಮಾವೇಶವನ್ನು ಉದ್ಘಾಟಿಸಿದರು.
ಎಐಎಡಿಎಂಕೆ ಪಕ್ಷ ಆರಂಭವಾಗಿ ಐವತ್ತು ವರ್ಷ ಪೂರೈಸಿದ್ದು, 51ನೇ ವರ್ಷಕ್ಕೆ ಕಾಲಿಟ್ಟ ಹಿನ್ನೆಲೆಯಲ್ಲಿ 51 ಅಡಿ ಎತ್ತರದ ಧ್ವಜಸ್ತಂಭ ನಿರ್ಮಿಸಲಾಗಿದೆ. ಸಮಾವೇಶದಲ್ಲಿ ಅಂದಾಜು 2 ಲಕ್ಷ ಜನರು ಭಾಗವಹಿಸುವಂತೆ ವ್ಯವಸ್ಥೆ ಮಾಡಲಾಗಿದ್ದು, ವಿವಿಧ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಜೊತೆಗೆ, ಸಂಗೀತಗೋಷ್ಠಿ ಸೇರಿದಂತೆ ವಿವಿಧ ಕಲಾ ಕಾರ್ಯಕ್ರಮಗಳು ನಡೆಯಲಿವೆ. ಇಂದು ಸಂಜೆ 5 ಗಂಟೆಗೆ ಮುಖಂಡರು ಭಾಷಣ ಮಾಡಲಿದ್ದು, ಪಕ್ಷದ ಹಿರಿಯ ಪದಾಧಿಕಾರಿಗಳನ್ನು ಸನ್ಮಾನಿಸಲಾಗುತ್ತದೆ.
ಇದನ್ನೂ ಓದಿ : ಎಐಎಡಿಎಂಕೆ ಚುಕ್ಕಾಣಿ ಹಿಡಿದ ಪಳನಿಸ್ವಾಮಿ ; ಚೆನ್ನೈನಲ್ಲಿ ಪಕ್ಷದ ಬೆಂಬಲಿಗರಿಂದ ಮಾರಾಮಾರಿ