ಬೆಂಗಳೂರಲ್ಲಿ ನಡೆದ ಅಗ್ನಿವೀರರ ಪಾಸಿಂಗ್ ಔಟ್ ಪರೇಡ್ : ವಿಡಿಯೋ ನೋಡಿ! - ಬೆಂಗಳೂರಲ್ಲಿ ನಡೆದ ಅಗ್ನಿವೀರರ ಪಾಸಿಂಗ್ ಔಟ್ ಪರೇಡ್
🎬 Watch Now: Feature Video
ಬೆಂಗಳೂರು : ಹಲವು ವಿವಾದಗಳ ನಡುವೆ ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆಯಡಿ ತರಬೇತಿ ಪಡೆದ ನೂರಾರು ಯುವ 'ಅಗ್ನಿವೀರರು' ಇಂದು ರಾಜಧಾನಿ ಬೆಂಗಳೂರಿನ ಎಎಸ್‌ಸಿ ಸೆಂಟರ್ ಮತ್ತು ಕಾಲೇಜಿನಲ್ಲಿ ನಡೆದ ಪಾಸಿಂಗ್ ಔಟ್ ಪರೇಡ್‌ನಲ್ಲಿ ಭಾಗವಹಿಸಿ ಗಮನ ಸೆಳೆದರು.
ಇದನ್ನೂ ಓದಿ : ದೇಶ ಸೇವೆಗೆ ಸನ್ನದ್ಧರಾದ ಅಗ್ನಿವೀರರು : ತರಬೇತಿಯಲ್ಲಿ ಕ್ಷಮತೆ ತೋರಿದ ವೀರರಿಗೆ ಸಿಕ್ತು ಏರ್ ಮಾರ್ಷಲ್ ಕಡೆಯಿಂದ ಬಹುಮಾನ
ಬದ್ಧತೆ ಮತ್ತು ಸಂಕಲ್ಪದೊಂದಿಗೆ ದೇಶ ಸೇವೆ ಸಲ್ಲಿಸಲು ಯೋಧರಾಗಲು ನಿರ್ಧರಿಸಿರುವ ಯುವಕರಿಗೆ ಇದು ಅತ್ಯಂತ ಹೆಮ್ಮೆಯ ಕ್ಷಣವಾಗಿತ್ತು. ಅಗ್ನಿವೀರರನ್ನು ನೋಡಲು ಆಗಮಿಸಿದ ಅವರ ತಂದೆ ತಾಯಿ, ಸಹೋದರ - ಸಹೋದರಿಯರು, ಸ್ನೇಹಿತರು, ಬಂಧು - ಬಳಗದವರು ಸಂತಸ ವ್ಯಕ್ತಪಡಿಸಿದರು. ಯೋಧರು ಸಮವಸ್ತ್ರ ಧರಿಸಿ, ಪರೇಡ್‌ನಲ್ಲಿ ಹೆಜ್ಜೆ ಹಾಕುವುದನ್ನು ನೋಡುವುದೇ ಕಣ್ಣುಗಳಿಗೆ ಹಬ್ಬದಂತಿತ್ತು. ತರಬೇತಿ ಅವಧಿಯಲ್ಲಿ ತಾವು ಪಡೆದ ವಿವಿಧ ಕೌಶಲ್ಯಗಳನ್ನು ಅಗ್ನಿವೀರರು ಪ್ರದರ್ಶಿಸಿ, ತಮ್ಮ ಸಾಮರ್ಥ್ಯ ಸಾಬೀತು ಮಾಡಿದರು. ಇಲ್ಲಿ ತರಬೇತಿ ಪಡೆದ ಅಗ್ನಿವೀರರಿಗೆ ನಾಲ್ಕು ವರ್ಷ ಸೇವಾವವಧಿ ಇರುತ್ತದೆ.
ಇದನ್ನೂ ಓದಿ : ಸಮುದ್ರದಲ್ಲಿ ಹೋರಾಟಕ್ಕೆ ಅಗ್ನಿವೀರ್ ಮಹಿಳೆಯರು ಸಜ್ಜು