ವಿಡಿಯೋ: ಶಾಪಿಂಗ್​ ಸಮಯದಲ್ಲಿ ಗ್ರಾಹಕನ ಮೊಬೈಲ್ ಎಗರಿಸಿದ ಆಸಾಮಿ..

By

Published : Jul 13, 2022, 8:58 PM IST

Updated : Feb 3, 2023, 8:24 PM IST

thumbnail
ಶಾಪಿಂಗ್​ಗೆ ಹೋದಾಗ ಎಲ್ಲೆಂದರಲ್ಲಿ ಮೊಬೈಲ್ ಇರಿಸುವ ಮುನ್ನ ಎಚ್ಚರ. ನಿಮ್ಮಂತೆಯೇ ಗ್ರಾಹಕರಂತೆ ಬಂದವರು ಕ್ಷಣಮಾತ್ರದಲ್ಲಿ ನಿಮ್ಮ ಮೊಬೈಲ್ ಎಗರಿಸಬಹುದು. ಅಂತಹದ್ದೊಂದು ಘಟನೆ ನಗರದ ಸಂಪಂಗಿ ರಾಮನಗರ ಠಾಣಾ ವ್ಯಾಪ್ತಿಯ ಬಟ್ಟೆ ಅಂಗಡಿಯೊಂದರಲ್ಲಿ ನಡೆದಿದೆ. ಇಂದು ಮಧ್ಯಾಹ್ನ ಗ್ರಾಹಕರ ಸೋಗಿನಲ್ಲಿ‌ ಅಂಗಡಿಗೆ ಬಂದಿದ್ದ ವ್ಯಕ್ತಿಯೊಬ್ಬ ಬಟ್ಟೆ ಟ್ರಯಲ್ ‌ನೋಡಲು ಹೋಗಿದ್ದ. ಮತ್ತೊಬ್ಬ ಗ್ರಾಹಕನ ಮೊಬೈಲ್​ ಅನ್ನು ಸದ್ದಿಲ್ಲದೇ ಎಗರಿಸಿ ಪರಾರಿಯಾಗಿದ್ದಾನೆ. ಟ್ರಯಲ್ ರೂಮಿನಿಂದ ಬಂದ ಗ್ರಾಹಕ ನೋಡಿದಾಗ ಮೊಬೈಲ್ ನಾಪತ್ತೆಯಾಗಿರುವುದು ತಿಳಿದಿದೆ. ಬಳಿಕ ಅಂಗಡಿಯ ಸಿಸಿಟಿವಿ ದೃಶ್ಯಾವಳಿಗಳನ್ನ ಗಮನಿಸಿದಾಗ ಕಳ್ಳನ ಕೈಚಳಕ ಬಯಲಾಗಿದ್ದು, ಸಂಪಂಗಿರಾಮ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated : Feb 3, 2023, 8:24 PM IST

TAGGED:

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.