ಕೊಡಗು: ಕಾರು - ಆಟೋ ನಡುವೆ ಭೀಕರ ಅಪಘಾತ.. ಸಿಸಿಟಿವಿಯಲ್ಲಿ ದೃಶ್ಯ ಸೆರೆ - Accident between car and auto
🎬 Watch Now: Feature Video
Published : Nov 9, 2023, 11:01 PM IST
ಕೊಡಗು: ಜಿಲ್ಲೆಯ ಗೋಣಿಕೊಪ್ಪ ಸಮೀಪದ ಕೈಕೇರಿಯ ಭಗವತಿ ದೇವಾಲಯದ ಬಳಿ ಕಾರು ಹಾಗೂ ಆಟೋ ನಡುವೆ ಡಿಕ್ಕಿ ಸಂಭವಿಸಿದ್ದು, ಭೀಕರ ಅಪಘಾತದ ದೃಶ್ಯ ಸಮೀಪದ ಮಳಿಗೆಯೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಘಟನೆಯಲ್ಲಿ ಆಟೋ ಚಾಲಕ ಕೈಕೇರಿ ನಿವಾಸಿ ಶಿವಣ್ಣ ನಾಯಕ ಗಂಭೀರವಾಗಿ ಗಾಯಗೊಂಡಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿರಾಜಪೇಟೆ ಕಡೆಯಿಂದ ವೇಗವಾಗಿ ಬಂದ ಕಾರು ನಿಯಂತ್ರಣ ಕಳೆದುಕೊಂಡು ಗೋಣಿಕೊಪ್ಪ ಕಡೆಯಿಂದ ವಿರಾಜಪೇಟೆಯತ್ತ ತೆರಳುತ್ತಿದ್ದ ಆಟೋಗೆ ಡಿಕ್ಕಿ ಹೊಡೆದಿದೆ. ಈ ಬಗ್ಗೆ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಯಚೂರಲ್ಲಿ ಅಪಘಾತ: ಇತ್ತೀಚೆಗೆ (ನ.6ರಂದು) ರಾಯಚೂರಿನ ಸಿರವಾರ ತಾಲೂಕಿನ ಅತ್ತನೂರು ಗ್ರಾಮದ ಹೊರವಲಯದ ಪೆಟ್ರೋಲ್ ಬಂಕ್ ಬಳಿ ಬೈಕ್ ಹಾಗೂ ಸಾರಿಗೆ ಬಸ್ ನಡುವೆ ಅಪಘಾತ ಸಂಭವಿಸಿತ್ತು. ಬೈಕ್ ಸವಾರರಿಬ್ಬರಿಗೆ ಗಾಯಗಳಾಗಿದ್ದು, ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಬಸ್ ಚಾಲಕನ ಸಮಯಪ್ರಜ್ಞೆಯಿಂದ ದೊಡ್ಡ ಅನಾಹುತವೊಂದು ತಪ್ಪಿತ್ತು. ಘಟನೆಯಲ್ಲಿ ನಿಲೋಗಲ್ ಕ್ಯಾಂಪ್ ಗ್ರಾಮದ ನಾರಾಯಣ ತಾಯಪ್ಪ ಹಾಗೂ ಅವರ ಮಗ ಕಾರ್ತಿಕ್ ಗಾಯಗೊಂಡಿದ್ದರು. ಬೈಕ್ ಸವಾರರು ಸಿರವಾರ ಪಟ್ಟಣದತ್ತ ಬೈಕ್‌ನಲ್ಲಿ ತೆರಳುತ್ತಿದ್ದಾಗ ಮಾರ್ಗಮಧ್ಯೆ ಅವಘಡ ನಡೆದಿತ್ತು.