₹10 ಸಾವಿರ ಠೇವಣಿಯನ್ನು ನಾಣ್ಯಗಳಲ್ಲೇ ಪಾವತಿಸಿದ ಆಮ್ ಆದ್ಮಿ ಅಭ್ಯರ್ಥಿ- ವಿಡಿಯೋ - ಈಟಿವಿ ಭಾರತ ಕನ್ನಡ
🎬 Watch Now: Feature Video
ಹಾವೇರಿ : ಕರ್ನಾಟಕ ವಿಧಾನಸಭೆ ಚುನಾವಣೆ ಘೋಷಣೆಯಾಗಿದೆ. ಅಭ್ಯರ್ಥಿಗಳಿಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದೆ. ಚುನಾವಣೆಗೆ ಸ್ಪರ್ಧಿಸಲು ಮುಂದಾಗಿರುವ ಅಭ್ಯರ್ಥಿಯೋರ್ವರು ನಾಣ್ಯಗಳ ಮೂಲಕ ಚುನಾವಣಾ ಠೇವಣಿ ಹಣ ಪಾವತಿ ಮಾಡಿರುವ ಘಟನೆ ಜಿಲ್ಲೆಯ ರಾಣೇಬೆನ್ನೂರಿನಲ್ಲಿ ನಡೆದಿದೆ. ಇದನ್ನು ಕಂಡು ಚುನಾವಣಾಧಿಕಾರಿಗಳು ಕೆಲಕಾಲ ತಬ್ಬಿಬ್ಬಾದರು.
ರಾಣೆಬೆನ್ನೂರು ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷದಿಂದ ಸ್ಫರ್ಧಿಸುತ್ತಿರುವ ಹನುಮಂತಪ್ಪ ಕಬ್ಬಾರ ಸೋಮವಾರ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಸುವಾಗ ಚುನಾವಣಾಧಿಕಾರಿಗಳಿಗೆ 10 ಸಾವಿರ ರೂಪಾಯಿ ಠೇವಣಿ ಇಡಬೇಕಿರುವುದು ನಿಯಮ. ಈ ಹತ್ತು ಸಾವಿರ ರೂಪಾಯಿ ಹಣವನ್ನು ಕಬ್ಬಾರ್ ಅವರು ನಾಣ್ಯದ ರೂಪದಲ್ಲಿಯೇ ತಂದಿದ್ದಾರೆ. ಈ ನಾಣ್ಯಗಳನ್ನು ಎಣಿಸಲು ಮುಂದಾದ ಚುನಾವಣಾಧಿಕಾರಿ ಸುಸ್ತಾಗಿ ಹೋದರು. ನಂತರ ತಮ್ಮ ಸಿಬ್ಬಂದಿಯನ್ನು ಕರೆಸಿ ನಾಣ್ಯ ಎಣಿಸಲು ಮುಂದಾದರು. ಆದರೂ ಎಣಿಕೆ ಮುಗಿಯದ ಕಾರಣ ಅಭ್ಯರ್ಥಿ ಹನುಮಂತಪ್ಪ ಕಬ್ಬಾರ್‌ಗೆ ನಾಮಪತ್ರ ಸಲ್ಲಿಸಲು ಅನುಮತಿ ನೀಡಿದ ಚುನಾವಣಾಧಿಕಾರಿಗಳು ಹಣದ ರಶೀದಿ ನೀಡಿ ಕಳುಹಿಸಿದ್ದಾರೆ. ನಂತರ ಬ್ಯಾಂಕ್ ಸಿಬ್ಬಂದಿಯನ್ನು ಕರೆಸಿ ಹಣ ಎಣಿಸಿಕೊಂಡಿದ್ದಾರೆ.
ಇದನ್ನೂ ಓದಿ : ಕಾಂಗ್ರೆಸ್ ಸೇರಿದ ಜಗದೀಶ್ ಶೆಟ್ಟರ್: 150 ಸೀಟ್ ಪಕ್ಕಾ ಎಂದ ಮಲ್ಲಿಕಾರ್ಜುನ್ ಖರ್ಗೆ!