ಜನರ ಮೇಲೆ ದಾಳಿ ನಡೆಸಿದ ಕಾಡು ಹಂದಿ: ಒಬ್ಬ ಬಲಿ, ಐವರಿಗೆ ಗಂಭೀರ ಗಾಯ - ಐವರು ಗಂಭೀರ ಗಾಯ

🎬 Watch Now: Feature Video

thumbnail

By ETV Bharat Karnataka Team

Published : Sep 13, 2023, 11:03 PM IST

ಮೊಗಾ (ಪಂಜಾಬ್) : ​​ ಕಾಡು ಹಂದಿ ದಾಳಿಗೆ ಒಬ್ಬ ಸಾವನ್ನಪ್ಪಿ, ಐವರು ಗಂಭೀರ ಗಾಯಗೊಂಡಿರುವ ಘಟನೆ ಪಂಜಾಬ್​ನ ಮೊಗಾ ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿನ ಧರ್ಮಕೋಟ್​ ಪಟ್ಟಣದ ಅಮಿವಾಲಾ ಗ್ರಾಮದಲ್ಲಿ ಕಾಡು ಹಂದಿ ಏಕಾಏಕಿ ಗ್ರಾಮಕ್ಕೆ ನುಗ್ಗಿ ದಾಳಿ ನಡೆಸಿದೆ. ಈ ವೇಳೆ, ಓರ್ವ ವೃದ್ಧ ಸಾವನ್ನಪ್ಪಿದ್ದು, ಐವರು ಗಂಭೀರ ಗಾಯಗೊಂಡಿದ್ದಾರೆ. ಮಕ್ಕಳು ಮತ್ತು ಮಹಿಳೆಯರಿಗೆ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ಕಾಡು ಹಂದಿ ದಾಳಿ ನಡೆಸುತ್ತಿರುವ ದೃಶ್ಯ ಇಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ವಿಡಿಯೋದಲ್ಲಿ ಕಾಡು ಹಂದಿ ಅತ್ತಿಂದಿತ್ತ ಓಡುತ್ತಿರುವುದನ್ನು ಕಾಣಬಹುದು. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ದಾಳಿ ಬಳಿಕ ಗ್ರಾಮಸ್ಥರು ಹಂದಿಯನ್ನು ಹಿಡಿಯಲು ಯತ್ನಿಸಿದ್ದು, ಈ ವೇಳೆ ಹಂದಿ ಗ್ರಾಮಸ್ಥರಿಂದ ತಪ್ಪಿಸಿಕೊಂಡು ಹೊಲಕ್ಕೆ ನುಗ್ಗಿದೆ. ಬಳಿಕ ಕಾಡಿಗೆ ಪರಾರಿಯಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಈ ರೀತಿ ಕಾಡುಪ್ರಾಣಿಗಳು ಆಹಾರವನ್ನು ಅರಸಿಕೊಂಡು ನಾಡಿಗೆ ಬರುತ್ತಿದ್ದು, ಕೆಲವೊಮ್ಮೆ ಜನರ ಮೇಲೆ ದಾಳಿ ನಡೆಸುತ್ತವೆ.

ಇದನ್ನೂ ಓದಿ : ಜಮೀನಿನಲ್ಲಿ ಕೆಲಸ ಮಾಡುವ ವೇಳೆ ಕಾಡು ಹಂದಿ ದಾಳಿ: ಇಬ್ಬರ ಸ್ಥಿತಿ ಗಂಭೀರ

ABOUT THE AUTHOR

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.