ಚಿಕ್ಕಮಗಳೂರು: ಮನೆಯಂಗಳಕ್ಕೆ ಬಂದು ಕಾರು ಜಖಂಗೊಳಿಸಿದ ಕಾಡಾನೆ- ವಿಡಿಯೋ - wild elephant attcak in chikkamagaluru
🎬 Watch Now: Feature Video
ಚಿಕ್ಕಮಗಳೂರು: ಮನೆ ಪಕ್ಕದಲ್ಲಿದ್ದ ಶೆಡ್ಗೆ ಕಾಡಾನೆ ನುಗ್ಗಿ ಅಲ್ಲಿದ್ದ ಕಾರು ಜಖಂಗೊಳಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ. ಮೂಡಿಗೆರೆ ತಾಲೂಕಿನ ಊರುಬಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೇರಿಕೆ ಗ್ರಾಮದ ಮಹೇಶ್ ಎಂಬವರ ಮನೆಯಲ್ಲಿ ಕಳೆದ ರಾತ್ರಿ ಘಟನೆ ನಡೆದಿದೆ. ಮಳೆ ಸುರಿಯುತ್ತಿದ್ದ ಸಂದರ್ಭದಲ್ಲಿ ಬಂದಿದ್ದ ಕಾಡಾನೆ ಶೆಡ್ ಉರುಳಿಸಿದೆ. ಕಾರಿನ ಹಿಂಭಾಗದ ಗ್ಲಾಸ್ ಸಂಪೂರ್ಣ ಪುಡಿಯಾಗಿದೆ. ಮೂಡಿಗೆರೆ ಅರಣ್ಯ ಇಲಾಖೆ ಆನೆ ಕಾರ್ಯಪಡೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಊರುಬಗೆ ಭಾಗದಲ್ಲಿ ಕಳೆದ ಅನೇಕ ದಿನಗಳಿಂದ ಮೂರ್ನಾಲ್ಕು ಕಾಡಾನೆಗಳು ಸತತವಾಗಿ ಗ್ರಾಮದೊಳಗೆ ದಾಳಿ ಮಾಡುತ್ತಿವೆ. ಹಗಲು-ರಾತ್ರಿಯೆನ್ನದೆ ರಸ್ತೆ, ಕಾಫಿ ತೋಟಗಳಲ್ಲಿ ಓಡಾಡುತ್ತಿವೆ. ಇದರಿಂದ ಸ್ಥಳೀಯರು ಭಯಭೀತರಾಗಿದ್ದಾರೆ. ಕಾರ್ಮಿಕರು ತೋಟದ ಕೆಲಸಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಕಾಡಾನೆಗಳನ್ನು ನಿಯಂತ್ರಿಸುವಂತೆ ಸ್ಥಳೀಯರು ಒತ್ತಾಯಿಸುತ್ತಿದ್ದಾರೆ. ಶೆಡ್ ಮತ್ತು ಕಾರು ಜಖಂ ನಷ್ಟವಾಗಿದ್ದು ಸೂಕ್ತ ಪರಿಹಾರ ನೀಡುವಂತೆ ಅರಣ್ಯ ಇಲಾಖೆಗೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಪ್ರಜ್ಞೆ ತಪ್ಪಿದ ಹಾವಿಗೆ ನೀರು ಕೊಟ್ಟು ಕಾಪಾಡಿದ ಸಾಮಾಜಿಕ ಕಾರ್ಯಕರ್ತ: ವಿಡಿಯೋ