ಸಾಲದ ಕಂತು ಕಟ್ಟಮ್ಮ, ಇಲ್ಲಾಂದ್ರೆ ಸತ್ತೋಗು: ಮಹಿಳೆಗೆ ಧಮ್ಕಿ ಹಾಕಿದ ಬ್ಯಾಂಕ್ ಸಿಬ್ಬಂದಿ - ವಿಡಿಯೋ ವೈರಲ್ - bank staff threatened to woman
🎬 Watch Now: Feature Video
ಮೈಸೂರು: ಸಾಲದ ಕಂತು ಕಟ್ಟಮ್ಮ, ಇಲ್ಲಾಂದ್ರೆ ಸತ್ತೋಗು, ಸಾಲ ಮನ್ನಾ ಆಗುತ್ತದೆ ಎಂದು ರೈತ ಮಹಿಳೆಗೆ ಖಾಸಗಿ ಬ್ಯಾಂಕ್ ಸಿಬ್ಬಂದಿ ಧಮ್ಕಿ ಹಾಕಿರುವ ಘಟನೆ ಹುಣಸೂರಿನಲ್ಲಿ ನಡೆದಿದೆ. ಹುಣಸೂರು ತಾಲೂಕಿನ ಕೊಳಘಟ್ಟ ಗ್ರಾಮದ ರೈತ ಮಹಿಳೆ ಲತಾ ಎಂಬುವರಿಗೆ ಬ್ಯಾಂಕ್ ಸಿಬ್ಬಂದಿ ಸುರೇಶ್ ಎಂಬಾತ ಧಮ್ಕಿ ಹಾಕಿದ್ದಾರೆ. ಬ್ಯಾಂಕ್ನಲ್ಲಿ ಲತಾ 50 ಸಾವಿರ ಸಾಲ ಪಡೆದಿದ್ದಾರೆ. ವಾರಕ್ಕೆ 500 ರೂ. ನಂತೆ ಕಂತು ಪಾವತಿಸಲು ಸಾಧ್ಯವಾಗದ ಹಿನ್ನೆಲೆ ಕೆಲವು ಕಂತುಗಳನ್ನು ಕಟ್ಟಿಲ್ಲ. ಹೀಗಾಗಿ, ನಡುರಸ್ತೆಯಲ್ಲೇ ಮಹಿಳೆಯನ್ನು ಅಡ್ಡಹಾಕಿದ ಸಿಬ್ಬಂದಿ, ಸಾಲ ವಸೂಲಿಗೆ ನಿಂತಿದ್ದಾರೆ. ರಸ್ತೆಯಲ್ಲಿ ಮಹಿಳೆಗೆ ಧಮ್ಕಿ ಹಾಕುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Last Updated : Feb 3, 2023, 8:33 PM IST