ಕಾರವಾರ: ಎಂಜಿನ್ ವೈಫಲ್ಯದಿಂದ ಅಪಾಯಕ್ಕೆ ಸಿಲುಕಿದ್ದ ಹಡಗು.. 8 ವಿಜ್ಞಾನಿಗಳ ಸಹಿತ 36 ಮಂದಿ ರಕ್ಷಣೆ - Indian Coast Guard
🎬 Watch Now: Feature Video
ಕಾರವಾರ (ಉತ್ತರ ಕನ್ನಡ): ಎಂಜಿನ್ ವೈಫಲ್ಯದಿಂದ ಅಪಾಯಕ್ಕೆ ಸಿಲುಕಿದ್ದ ಸಿಎಸ್‌ಐಆರ್ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಷಿಯಾನೋಗ್ರಫಿ ಸಂಶೋಧನಾ ಹಡಗನ್ನು ಭಾರತೀಯ ಕೋಸ್ಟ್ ಗಾರ್ಡ್ ಸಿಬ್ಬಂದಿ ಗುರುವಾರ ರಕ್ಷಿಸಿದ್ದಾರೆ. ಹಡಗಿನಲ್ಲಿ 8 ಮಂದಿ ಖ್ಯಾತ ವಿಜ್ಞಾನಿಗಳು ಸೇರಿದಂತೆ ಇತರ ಸಿಬ್ಬಂದಿ ಇದ್ದರು.
ಆರ್‌ವಿ ಸಿಂಧೂ ಸಾಧನಾ ಎಂಬ ಹೆಸರಿನ ಹಡಗು ಎಂಜಿನ್ ವೈಫಲ್ಯದಿಂದ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಸಮೀಪದಲ್ಲಿ ಅಪಾಯಕ್ಕೆ ಸಿಲುಕಿತ್ತು. ಹಡಗಿನ ತೈಲ ಸೋರಿಕೆಗೆ ಕಾರಣವಾಗಬಹುದು ಎಂದು ಹಡಗಿನ ಅಧಿಕಾರಿಗಳು ಕೋಸ್ಟ್ ಗಾರ್ಡ್ಗೆ ಮಾಹಿತಿ ನೀಡಿದ್ದರು.
ಅದರಂತೆ ಕಡಲ ತೀರದಿಂದ ಸುಮಾರು 20 ನಾಟಿಕಲ್ ಮೈಲಿಗಳಷ್ಟು ದೂರದಲ್ಲಿದ್ದ ಹಡಗನ್ನು ಸಂಪರ್ಕಕ್ಕೆ ಪಡೆದು ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ. ಈ ಆಧುನಿಕ ಸಂಶೋಧನಾ ನೌಕೆಯು 8 ಮಂದಿ ಹಿರಿಯ ವಿಜ್ಞಾನಿಗಳು, ಮೌಲ್ಯಯುತ ವೈಜ್ಞಾನಿಕ ಉಪಕರಣಗಳು ಮತ್ತು ಸಂಶೋಧನಾ ಮಾಹಿತಿ ಸೇರಿದಂತೆ 36 ಜನರನ್ನು ಹೊತ್ತೊಯ್ಯುತ್ತಿರುವುದರಿಂದ ಪರಿಸ್ಥಿತಿ ಗಂಭೀರವಾಗಿತ್ತು. ಸವಾಲಿನ ಹವಾಮಾನದ ನಡುವೆಯೂ ಐಸಿಜಿ ತಂಡವು ಸುರಕ್ಷಿತವಾಗಿ ಗೋವಾಕ್ಕೆ ಹಡಗನ್ನು ಎಳೆದೊಯ್ಯುವ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಸಿದೆ. ಹಡಗಿನಲ್ಲಿರುವ ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಕೋಸ್ಟ್ ಗಾರ್ಡ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಹಾಸನ: ಮೈದುಂಬಿ ಹರಿಯುತ್ತಿರುವ ಮೂಕನಮನೆ ಜಲಪಾತ.. ನೀರಿನಲ್ಲಿ ಸಿಲುಕಿದ್ದ ಪ್ರವಾಸಿಗನ ರಕ್ಷಣೆ