ಜೀವಂತ ಕೋಳಿ ಎಸೆದು ಸಿಡಿ ಜಾತ್ರೆ ಆಚರಿಸುವ ವಿಶಿಷ್ಟ ಪದ್ಧತಿ: ವೀಡಿಯೋ
🎬 Watch Now: Feature Video
ಮೈಸೂರು: ಜೀವಂತ ಕೊಳಿಗಳನ್ನು ಜಾತ್ರೆಯಲ್ಲಿ ಎಸೆದು ವಿಶಿಷ್ಟ ರೀತಿಯಲ್ಲಿ ಸಾಂಪ್ರದಾಯಿಕವಾಗಿ, ಧಾರ್ಮಿಕ ಸಿಡಿ ಜಾತ್ರೆಯನ್ನು ಹುಣಸೂರು ತಾಲೂಕಿನ ಕಟ್ಟೆಮಳಲವಾಡಿ ಗ್ರಾಮದಲ್ಲಿ ಅದ್ಧೂರಿಯಾಗಿ ಆಚರಿಸಲಾಯಿತು.
ಸಾಮಾನ್ಯವಾಗಿ ಊರ ಹಬ್ಬಗಳಲ್ಲಿ ಪ್ರಾಣಿಗಳನ್ನು ಬಲಿ ಕೊಡುತ್ತಾರೆ, ಕೋಳಿಗಳನ್ನು ಬಲಿ ಕೊಟ್ಟು ನಂತರ ಊಟ ಮಾಡುವುದು ಆಚರಣೆ. ಆದರೆ, ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಕಟ್ಟೆಮಳಲವಾಡಿ ಗ್ರಾಮದ ಊರಿನ ದೇವರಾದ ವೆಂಕಟರಮಣ ಸ್ವಾಮಿಗೆ ಗ್ರಾಮಸ್ಥರು ಪೂಜೆ ಸಲ್ಲಿಸಿ, ಆನಂತರ ಗ್ರಾಮದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಸಿಡಿ ಜಾತ್ರೆ ನಡೆಸುತ್ತಾರೆ. ಈ ಜಾತ್ರೆಯಲ್ಲಿ ಸುತ್ತಮುತ್ತಲಿನ ಸಾವಿರಾರು ಜನ ಗ್ರಾಮಸ್ಥರು ಭಾಗವಹಿಸುತ್ತಾರೆ.
ಇದರಲ್ಲಿ ಸಿಡಿ ಜಾತ್ರೆಯಲ್ಲಿ ಜೀವಂತ ಕೋಳಿಗಳನ್ನು ಎಸೆದು, ಭಕ್ತರು ಹರಕೆ ತೀರಿಸುವುದು ಸಂಪ್ರದಾಯ. ಆ ಸಂಪ್ರದಾಯ ತಲಾತಲಾಂತರದಿಂದ ನಡೆದುಕೊಂಡು ಬಂದಿದೆ. ತಾವು ಹರಕೆ ಹೊತ್ತು, ಹರಕೆ ಈಡೇರಿದಾಗ ಪ್ರತಿ ವರ್ಷವೂ ಈ ರೀತಿ ಸಿಡಿ ಜಾತ್ರೆಯಲ್ಲಿ ಜೀವಂತ ಕೋಳಿ ಎಸೆಯುವ ಮೂಲಕ ಹರಕೆ ತೀರಿಸುವುದು ಸಂಪ್ರದಾಯ. ಈ ರೀತಿ ಸಿಡಿ ಜಾತ್ರೆಯಲ್ಲಿ ಎಸೆದ ಜೀವಂತ ಕೋಳಿಗಳು ಕೆಲವು ಸಲ ಸಾಯುವುದಿಲ್ಲ. ಮತ್ತೆ ಕೆಲವು ಸಲ ಕೆಳಗೆ ಬಿದ್ದು ಸಾಯುತ್ತವೆ. ಈ ಸಿಡಿ ಜಾತ್ರೆಯನ್ನು ಶುಕ್ರವಾರದಂದು ಕಟ್ಟೆಮಳಲವಾಡಿ ಗ್ರಾಮದಲ್ಲಿ ಅದ್ಧೂರಿಯಾಗಿ ಗ್ರಾಮಸ್ಥರು ಆಚರಿಸಿದರು. ಜಾತ್ರೆಗೆ ಅಕ್ಕಪಕ್ಕದ ಗ್ರಾಮಸ್ಥರು ಆಗಮಿಸಿದ್ದರು.
ಇದನ್ನೂ ಓದಿ: ಮಡಿಕೇರಿಯಲ್ಲಿ ವಿಜೃಂಭಣೆಯಿಂದ ಜರುಗಿದ ಮುತ್ತಪ್ಪ ಉತ್ಸವ