ಕಬ್ಬು ತುಂಬಿದ್ದ ಟ್ರಾಕ್ಟರ್ ಮನೆ ಮೇಲೆ ಪಲ್ಟಿ.. ಸ್ಥಳದಲ್ಲೇ ಅಜ್ಜಿ ಸಾವು, ಐವರಿಗೆ ಗಂಭೀರ ಗಾಯ - bylahongala accident
🎬 Watch Now: Feature Video
ಬೆಳಗಾವಿ: ಕಬ್ಬು ತುಂಬಿದ್ದ ಟ್ರಾಕ್ಟರ್ ಮನೆ ಮೇಲೆ ಪಲ್ಟಿ ಹೊಡೆದು ಓರ್ವ ಅಜ್ಜಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಶಿಗೀಹಳ್ಳಿ ಗ್ರಾಮದಲ್ಲಿ ನಡೆದಿದೆ. ಈ ಘಟನೆಯಲ್ಲಿ ಮನೆಯಲ್ಲಿ ವಾಸಿಸುತ್ತಿದ್ದ ಐದು ಜನರು ಗಂಭೀರ ಗಾಯಗೊಂಡಿದ್ದು, ಮನೆಯಲ್ಲಿ ಸಾಕಿದ ಆರು ಕುರಿಗಳು ಸಾವನ್ನಪ್ಪಿವೆ. ಮರಿಕಟ್ಟಿ ಗ್ರಾಮದಿಂದ ಕಬ್ಬು ತುಂಬಿಕೊಂಡು ಸಕ್ಕರೆ ಕಾರ್ಖಾನೆಗೆ ಹೋಗುತ್ತಿದ್ದ ವೇಳೆ ಶಿಗಿಹಳ್ಳಿ ಗ್ರಾಮದ ಬಳಿ ಇರುವ ತಿರುವಿನಲ್ಲಿದ್ದ ಅಜ್ಪಪ್ಪ ಬಡಿಗೇರ ಎಂಬುವರ ಮನೆಯ ಮೇಲೆ ಕಬ್ಬು ತುಂಬಿದ ಟ್ರಾಕ್ಟರ್ ಪಲ್ಟಿ ಹೊಡೆದಿದೆ.
ಟ್ರಾಕ್ಟರ್ ಪಲ್ಟಿ ಹೊಡೆದ ಪರಿಣಾಮ ಪುಲಾರಕೊಪ್ಪ ಗ್ರಾಮದ ಓರ್ವ ಅಜ್ಜಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಈ ಘಟನೆ ಸಂಭವಿಸುತ್ತಿದ್ದಂತೆ ಗ್ರಾಮಸ್ಥರು ಘಟನಾ ಸ್ಥಳಕ್ಕೆ ದೌಡಾಯಿಸಿ ಗಾಯಗೊಂಡವರನ್ನು ಹಿರೇಬಾಗೇವಾಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳಕ್ಕೆ ಬೈಲಹೊಂಗಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಬಳ್ಳಾರಿ ಉತ್ಸವ : ಸಖತ್ ಸ್ಟೆಪ್ ಹಾಕಿದ ಶ್ರೀರಾಮುಲು, ಸೋಮಶೇಖರ್ ರೆಡ್ಡಿ