ಯಮುನಾ ನದಿ ಪ್ರವಾಹಕ್ಕೆ ಕುಸಿದು ಬಿದ್ದ ಮೂರು ಅಂತಸ್ತಿನ ಮನೆ.. ವಿಡಿಯೋ

🎬 Watch Now: Feature Video

thumbnail

ಪಲ್ವಾಲ್ (ಹರಿಯಾಣ): ಹರಿಯಾಣದಲ್ಲಿ ಮಳೆಯಿಂದಾಗಿ ಯಮುನಾ ನದಿ ಉಕ್ಕಿ ಹರಿಯುತ್ತಿದ್ದು, ಬಾಗ್‌ಪುರ ಗ್ರಾಮದ ಪಲ್ವಾಲ್‌ನಲ್ಲಿ ಯಮುನಾ ನದಿ ಪ್ರವಾಹದಲ್ಲಿ ಮೂರು ಅಂತಸ್ತಿನ ಮನೆ ನೆಲಸಮವಾಗಿದೆ. 30 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ್ದ ಮನೆ ಪ್ರವಾಹದಿಂದಾಗಿ ಕೆಲವೇ ಸೆಕೆಂಡುಗಳಲ್ಲಿ ಕುಸಿದು ಬಿದ್ದಿದೆ. ಈ ದೃಶ್ಯ ಹಲವರ ಮೊಬೈಲ್​ಗಳಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದೆ. ಸಾರ್ವಜನಿಕರು ನೋಡನೋಡುತ್ತಿದ್ದಂತೆ ಬಿರುಕು ಬಿಟ್ಟು ಮನೆ ನೆಲಸಮವಾಗುವ ದೃಶ್ಯ ಒಂದು ಕ್ಷಣ ನಮ್ಮನ್ನೆಲ್ಲ ಬೆರಗಾಗಿಸುವಂತಿದೆ.

ಇತ್ತೀಚೆಗಷ್ಟೇ ಮನೆ ಮಾಲೀಕರು ಈ ಮನೆಯನ್ನು ನಿರ್ಮಿಸಿದ್ದರು ಎಂದು ಹೇಳಲಾಗುತ್ತಿದೆ. ಶನಿವಾರ ಪಲ್ವಾಲ್‌ನಲ್ಲಿ ಯಮುನಾ ನದಿಯ ನೀರು ರಭಸವಾಗಿ ಹರಿಯುತ್ತಿದ್ದರಿಂದ 3 ಅಂತಸ್ತಿನ ಮನೆ ಯಮುನಾ ನದಿಗೆ ಕೊಚ್ಚಿ ಹೋಗಿದೆ. ಆ ಸಮಯದಲ್ಲಿ ಮನೆಯಲ್ಲಿ ಯಾರೂ ಇಲ್ಲದಿದ್ದ ಕಾರಣ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಮಳೆಯಿಂದಾಗಿ ನದಿಯಲ್ಲಿ ನೀರಿನ ಮಟ್ಟ ನಿರಂತರವಾಗಿ ಹೆಚ್ಚಾಗುತ್ತಿದ್ದ ಕಾರಣ ಅಲ್ಲಿನ ಜನರನ್ನು ಸುರಕ್ಷಿತವಾಗಿ ಬೇರೆ ಸ್ಥಳಾಂತರಿಸಲಾಗಿದೆ. ಇದರಿಂದಾಗಿ ಮನೆಯಲ್ಲಿ ವಾಸಿಸುತ್ತಿದ್ದ ಇಡೀ ಕುಟುಂಬ ಸುರಕ್ಷಿತವಾಗಿದೆ.

ಮಾಹಿತಿ ನೀಡಿದ ಡಿಎಸ್ಪಿ, ಇದುವರೆಗೆ ಯಾವುದೇ ಪ್ರಾಣ ಹಾನಿಯಾಗಿಲ್ಲ. ನಿರಂತರವಾಗಿ ಹೆಚ್ಚುತ್ತಿರುವ ನೀರಿನ ಮಟ್ಟದಿಂದ ಮೋಹನ ಬಾಗ್‌ಪುರ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಇದರಿಂದ ಸುಮಾರು 16 ಗ್ರಾಮಗಳ ಸಂಪರ್ಕವೂ ಕಡಿತಗೊಂಡಿದೆ. ನೀರು ಸಹ ನಿರಂತರವಾಗಿ ಹೆಚ್ಚಾಗುತ್ತಿದೆ. ಜನರು ಸುರಕ್ಷಿತ ಸ್ಥಳಗಳಲ್ಲಿ ಇರುವಂತೆ ಮತ್ತು ನೀರಿನ ಮಟ್ಟ ವೇಗವಾಗಿ ಏರುತ್ತಿರುವ ಸ್ಥಳವನ್ನು ಖಾಲಿ ಮಾಡುವಂತೆ ಅವರು ಮನವಿ ಮಾಡಲಾಗಿದೆ. ಎಲ್ಲರೂ ಪರಸ್ಪರ ಸಹಾಯ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ನೋಡಿ: ಬೆಂಗಳೂರು-ಮೈಸೂರು ಹೈವೇಯಲ್ಲಿ ಪಕ್ಕದ ರಸ್ತೆಗೆ ಜಿಗಿದ ಬೃಹತ್ ಕಂಟೇನರ್​ ಲಾರಿ! ಭಯಾನಕ ದೃಶ್ಯ

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.