ಪೊಲೀಸ್ ಇಲಾಖೆಗೆ ಕಾನ್ಸ್ಟೇಬಲ್ನಿಂದ ವಿಶೇಷ ಬೆಲ್ಜಿಯಂ ತಳಿಯ ನಾಯಿ ಮರಿ ಉಡುಗೊರೆ - Belgian breed puppy
🎬 Watch Now: Feature Video
Published : Oct 21, 2023, 5:17 PM IST
|Updated : Oct 21, 2023, 5:49 PM IST
ಕೋಲಾರ: ಯೂರೋಪ್‌ನ ವಿಶೇಷ ತಳಿಯ ನಾಯಿಮರಿಯನ್ನು ಕಾನ್ಸ್ಟೇಬಲ್ವೊಬ್ಬರು ಪೊಲೀಸ್ ಇಲಾಖೆಗೆ ಉಡುಗೊರೆಯಾಗಿ ನೀಡಿದ್ದಾರೆ. ಹೆಡ್ ಕಾನ್ಸ್ಟೇಬಲ್ ಸುರೇಶ್ ಎಂಬುವವರು 61 ದಿನದ ಬೆಲ್ಜಿಯಂ ಮಲಿನೋಸ್ ಎಂಬ ತಳಿಯ ನಾಯಿಮರಿಯನ್ನು ಕೋಲಾರ ಎಸ್ಪಿ ಎಂ.ನಾರಾಯಣ್ ಹಾಗೂ ಡಿಸಿ ಅಕ್ರಂಪಾಷಾ ಮುಖಾಂತರ ಜಿಲ್ಲಾ ಪೊಲೀಸ್ ಇಲಾಖೆಗೆ ಹಸ್ತಾಂತರಿಸಲಾಯಿತು. ಯೂರೋಪ್ ಖಂಡದಲ್ಲಿ ಪೊಲೀಸ್ ಇಲಾಖೆಯಲ್ಲಿ ಹೆಚ್ಚಾಗಿ ಬಳಸುವ ಬೆಲ್ಜಿಯಂ ಮಲಿನೋಸ್ ತಳಿಯ ನಾಯಿ ಇದಾಗಿದೆ. ಅಪರಾದ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಈ ನಾಯಿ ಎಕ್ಸ್ಪರ್ಟ್. ಈ ನಾಯಿ ಮರಿಗೆ ಸಶಸ್ತ್ರ ಮೀಸಲು ಪಡೆಯಲ್ಲಿ ತರಬೇತಿ ನೀಡಲಾಗುವುದು. ಈ ಮೂಲಕ ಪೊಲೀಸರಿಗೆ ಅಪರಾಧ ಪ್ರಕರಣಗಳನ್ನು ಭೇದಿಸಲು ಸಹಕಾರಿಯಾಗಲಿದೆ.
ಇನ್ನೂ ಇಂದು ಕೋಲಾರ ನಗರದ ಕವಾಯತು ಮೈದಾನದಲ್ಲಿ ಪೊಲೀಸ್ ಹುತಾತ್ಮ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಇನ್ನೂ ಹುತಾತ್ಮ ದಿನಾಚರಣೆಗೆ ಕೋಲಾರ ಅಕ್ರಂ ಪಾಷಾ ಅವರು ಹುತಾತ್ಮ ಪೊಲೀಸ್ ಸ್ಮಾರಕಕ್ಕೆ ಹೂಗುಚ್ಚ ಇಟ್ಟು ಗೌರವ ಸಲ್ಲಿಸಿದರು. ಜತೆಗೆ ಕೆಜಿಎಫ್ ಚಾಂಪಿಯನ್ ರೀಪ್ನಲ್ಲಿರುವ ಕೆಜಿಎಫ್ ಕವಾಯತು ಮೈದಾನದಲ್ಲೂ ಹುತಾತ್ಮ ದಿನಾಚರಣೆಯನ್ನು ಹಮ್ಕೊಮಿಕೊಳ್ಳಲಾಗಿತ್ತು.
ಇದನ್ನೂ ಓದಿ: ಚಾಮರಾಜನಗರ ದಸರಾಕ್ಕೆ ಜನರಿಂದ ನೀರಸ ಪ್ರತಿಕ್ರಿಯೆ