Watch.. ಶಾಲಾ ಮಗುವಿನ ಶೂ ಒಳಗೆ ಹಾವು: ಹಾವಿನ ರಕ್ಷಣೆ ವಿಡಿಯೋ ವೈರಲ್
🎬 Watch Now: Feature Video
ಶಂಕರಕೋವಿಲ್ (ತಮಿಳುನಾಡು): ದಿನೇ ದಿನೆ ಚಳಿ ಕಡಿಮೆಯಾಗುತ್ತಿದ್ದು, ಬಿಸಿಲಿನ ಬೇಗೆ ಹೆಚ್ಚಾಗುತ್ತಿದೆ. ತಾಪಮಾನದಲ್ಲಿ ಏರಿಕೆ ಕಂಡು ಬರುತ್ತಿದೆ. ಮಧ್ಯಾಹ್ನದ ಹೊತ್ತಿಗೆ ಜನಸಾಮಾನ್ಯರು ಪ್ಯಾನ್, ಎಸಿ ಅಥವಾ ಕೂಲರ್ಗಳನ್ನು ಅರಸುತ್ತಿದ್ದಾರೆ. ಬಿಸಿಲು ಹೆಚ್ಚಾಗುತ್ತಿದ್ದಂತೆ ಹಾವುಗಳು ನೆರಳಿನತ್ತ ಬರುವುದು ಕಾಮನ್. ತಮಿಳುನಾಡಿ ಶಾಲೆಗೆ ಹೋಗುವ ಮಗುವಿನ ಶೂ ಒಳಗೆ ಹಾವು ಪತ್ತೆಯಾಗಿದೆ.
ಬಾಲಸುಬ್ರಮಣ್ಯಂ ತೆಂಕಶಿ ಜಿಲ್ಲೆಯ ಶಂಕರಕೋವಿಲ್ ಬಳಿಯ ಚಿನ್ನ ಕೋವಿಲಂಗುಳಂ ಗ್ರಾಮದಲ್ಲಿ ಮಗುವಿನ ಶೂನಲ್ಲಿ ಹಾವಿರುವ ವಿಡಿಯೋ ಈಗ ವೈರಲ್ ಆಗಿದೆ. ಶಾಲೆಗೆ ಮಗು ಎಂದಿನಂತೆ ಹೊರಟು ಶೂ ಹಾಕಿಕೊಂಡಿದೆ. ಈ ವೇಳೆ ಹಾವು ಇರುವುದು ಗೋಚರಿಸಿದೆ. ತಕ್ಷಣ ಮನೆಯವರು ಉರಗ ತಜ್ಞರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ತಜ್ಞ ಹಾವು ಹೊರತೆಗೆದು ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.
ಈ ಹಾವನ್ನು ಡೆಂಡ್ರೆಲಾಫಿಸ್ ಟ್ರಿಸ್ಟಿಸ್ ಎಂದು ಗುರುತಿಸಲಾಗಿದೆ. ಕನ್ನಡದಲ್ಲಿ ಇದನ್ನು ಸುರಂಗ ಹಾವು ಎಂದು ಕರೆಯುತ್ತಾರೆ. ಇದು ವಿಷಕಾರಿ ಅಲ್ಲ. ಬಿಸಿಲಿಗೆ ಹೆಚ್ಚಾಗಿ ಸುರಂಗಗಳಲ್ಲಿ ವಾಸವಿರುವುದರಿಂದ ಇದನ್ನು ಸುರಂಗ ಹಾವು ಎಂದು ಕರೆಯಲಾಗುತ್ತದೆ. ಹೊರಗೆ ತಾಪಮಾನ ಹೆಚ್ಚಾಗುತ್ತಿದ್ದಂತೆ ಹಾವು, ಚೇಳು ಮತ್ತು ವಿಷ ಜಂತುಗಳು ಮನೆಯ ಸುತ್ತಮುತ್ತ ತಂಪಾದ ಪ್ರದೇಶಗಳಲ್ಲಿ ವಾಸವಾಗಿರುತ್ತವೆ. ಈ ಬಗ್ಗೆ ಎಚ್ಚರಿಗೆ ವಹಿಸುವುದು ಉತ್ತಮ.
ಇದನ್ನೂ ಓದಿ: ಚಿಕ್ಕೋಡಿ: ಡಿವೈಎಸ್ಪಿ ಕಚೇರಿಯಲ್ಲಿ ಹಾವು ಪ್ರತ್ಯಕ್ಷ..