ಟ್ರ್ಯಾಕ್ಟರ್ಗೆ ಬೈಕ್ ಡಿಕ್ಕಿ ವಾಹನ ಸವಾರ ಸಾವು: ಸಿಸಿಟಿವಿಯಲ್ಲಿ ಅಪಘಾತದ ದೃಶ್ಯ ಸೆರೆ - ಹುಬ್ಬಳ್ಳಿ ರಸ್ತೆ ಅಪಘಾತ
🎬 Watch Now: Feature Video
ಹುಬ್ಬಳ್ಳಿ: ಇಲ್ಲಿನ ನವನಗರ ಹತ್ತಿರ ಟ್ರಾಕ್ಟರ್ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ವಾಹನ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಪರುಶುರಾಮ್ ವಾಲಿಕರ್ ಮೃತ ವ್ಯಕ್ತಿ. ನವನಗರದ ಕ್ಯಾನ್ಸರ್ ಆಸ್ಪತ್ರೆ ಹತ್ತಿರ ಪರುಶುರಾಮ್ ಮತ್ತು ಅವರ ಸ್ನೇಹಿತ ಬೈಕ್ ಮೇಲೆ ಚಲಿಸುತ್ತಿದ್ದ ವೇಳೆ ಎದುರಿಗೆ ಬಂದ ಟ್ರ್ಯಾಕ್ಟರ್ಗೆ ಬೈಕ್ ಡಿಕ್ಕಿ ಹೊಡೆದಿದೆ. ಪರಿಣಾಮ ಸವಾರ ಪರುಶುರಾಮ್ ತಲೆಗೆ ಪೆಟ್ಟು ಬಿದ್ದು ರಕ್ತಸ್ರಾವವಾಗಿ ಸ್ಥಳದಲೇ ಮೃತಪಟ್ಟಿದ್ದಾರೆ. ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ಕುರಿತಂತೆ ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯೋಧನಾಗುವ ಕನಸು ಕಂಡಿದ್ದ ಯುವಕ ಈಜಲು ತೆರಳಿ ಸಾವು: ಯೋಧನಾಗುವ ಆಸೆ ಹೊತ್ತಿದ್ದ ಯುವಕನೊಬ್ಬ ಕೆರೆಯಲ್ಲಿ ಈಜಲು ಹೋಗಿ ಸಾವನ್ನಪ್ಪಿದ ಘಟನೆ ಕಲಘಟಗಿಯ ಮಡಕಿಹೊನ್ನಳ್ಳಿ ಕೆರೆಯಲ್ಲಿ ನಡೆದಿದೆ. ಕಲಘಟಗಿ ಪಟ್ಟಣದ ಬೆಂಡಿಗೇರಿ ನಿವಾಸಿಯಾದ್ ಪವನ್ ನಾರಾಯಣಕರ (19) ಮೃತ ಯುವಕ. ಮಂಗಳವಾರ ಸಂಜೆ ಪವನ್ ಸ್ನೇಹಿತರೊಂದಿಗೆ ಈಜಲು ಕೆರೆಗೆ ಹೋಗಿದ್ದರು. ಕೆರೆ ಆಳವಾಗಿದ್ದ ಕಾರಣ ಈಜು ಬಾರದೆ ಮುಳುಗಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪವನ್ ಕೆಲ ತಿಂಗಳ ಹಿಂದೆ ಮಿಲಿಟರಿ ಪರೀಕ್ಷೆಗೆ ಹಾಜರಾಗಿ ಬಂದಿದ್ದು, ಸೈನ್ಯ ಸೇರಿ ದೇಶ ಸೇವೆ ಮಾಡುವ ಆಸೆ ಇಟ್ಟುಕೊಂಡಿದ್ದ. ಆದ್ರೆ ನೇಮಕಾತಿ ಆದೇಶ ಬರುವ ಮುನ್ನವೇ ಸಾವನ್ನಪ್ಪಿದ್ದಾನೆ.
ಇದನ್ನೂ ಓದಿ: ಆಂಬ್ಯುಲೆನ್ಸ್ ಮತ್ತು ಟೆಂಪೋ ನಡುವೆ ಅಪಘಾತ: ಎಂಟು ಜನರಿಗೆ ಗಾಯ