ಕೇಬಲ್, ವೈಫೈ ಕಚೇರಿಯಲ್ಲಿ ಗುಂಡಿನ ದಾಳಿ: ಸಿಸಿಟಿವಿಯಲ್ಲಿ ದೃಶ್ಯ ಸೆರೆ - ETV Bharath Kannada news
🎬 Watch Now: Feature Video
ನವದೆಹಲಿ: ಇಲ್ಲಿನ ಚಂಚಲ್ ಪಾರ್ಕ್‌ನಲ್ಲಿರುವ ಕೇಬಲ್ ಮತ್ತು ವೈಫೈ ಕಚೇರಿಗೆ ಬಂದ ಇಬ್ಬರು ದುಷ್ಕರ್ಮಿಗಳು ಮೂರು ಸುತ್ತಿನ ಗುಂಡು ಹಾರಿಸಿದ್ದಾರೆ. ಈ ಗುಂಡಿನ ದಾಳಿಯಲ್ಲಿ ಓರ್ವನಿಗೆ ಗಾಯವಾಗಿದೆ. ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಚಂಚಲ್ ಪಾರ್ಕ್‌ನ ಸೋಮ್ ಬಜಾರ್ ರಸ್ತೆಯಲ್ಲಿ ಈ ಕೇಬಲ್ ಮತ್ತು ವೈಫೈ ಕಚೇರಿಯಿದೆ. ಗುಂಡಿನ ದಾಳಿ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದು, ಅಂಗಡಿಯ ಸಿಸಿಟಿವಿಯಲ್ಲಿ ದಾಖಲಾದ ವಿಡಿಯೋವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ದಾಳಿಯ ಹಿಂದಿನ ಉದ್ದೇಶ ತಿಳಿದು ಬಂದಿಲ್ಲ.
ಇದನ್ನೂ ಓದಿ: ಆಟೋದಲ್ಲಿದ್ದ ನಗದು ಮತ್ತು ಪೆನ್ಡ್ರೈವ್ ಕಳ್ಳತನ; ಖದೀಮನ ಕೈಚಳಕ ಸಿಸಿಟಿವಿಯಲ್ಲಿ ಸೆರೆ